ಸಂಸದ ಶ್ರಮದಿಂದ ಬೆಳಗಾವಿಗೆ ಉಡಾನ್ ೩ ಸೇವೆ: ಅಭಯ

0
0
loading...

ಸಂಸದ ಶ್ರಮದಿಂದ ಬೆಳಗಾವಿಗೆ ಉಡಾನ್ ೩ ಸೇವೆ: ಅಭಯ
ಕನ್ನಡಮ್ಮ ಸುದ್ದಿ-ಬೆಳಗಾವಿ: ಬೆಳಗಾವಿಗೆ ಉಡಾನ್ ೩ ಅಡಿಯಲ್ಲಿ ವಿಮಾನ ಸೇವೆ ತರುವಲ್ಲಿ ಸಂಸದ ಸುರೇಶ ಅಂಗಡಿಯವರ ಶ್ರಮ ಬಹುಮುಖ್ಯವಾಗಿದೆ ಎಂದು ದಕ್ಷಿಣ ಕ್ಷೆÃತ್ರದ ಶಾಸಕ ಅಭಯ ಪಾಟೀಲ್ ಹೇಳಿದರು.
ಅವರು ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಟಾರ್ ಏರಲೈನ್ಸ್ ಏರ್ ಇಂಡಿಯಾ,ಜೆಟ್ ಏರವೇಸ್, ಇಂಡಿಗೋ ಮುಖ್ಯಸ್ಥರನ್ನು ವ್ಯಯಕ್ತಿಕವಾಗಿ ಸಂಪರ್ಕಿಸಿ ಉಚಿತ ಬಿಡ್ಡಿಂಗ್ ನಲ್ಲಿ ಬೆಳಗಾವಿಯಿಂದ ವಿಮಾನಯಾನ ಕಾರ್ಯರಂಭ ಮಾಡಲು ಸಂಸದರು ಮನವಿ ಮಾಡಿದ್ದಾರೆ. ಬೆಂಗಳೂರು, ಗೋವಾ ಸೂರತ್, ಜೈಪುರ, ದೆಹಲಿ, ಕಲ್ಕತ್ತಾ, ಶಿರಡಿ, ವಿಜಯವಾಡ್, ಮಂಗಳೂರು, ರಾಜಕೋಟ್, ವಾರಣಾಸಿ, ಕೋಯಮತ್ತೂರು, ಇಂಧೋರ್, ತಿರುಪತಿ, ಟ್ರಿವೆಂಡ್ರಮ್, ಪೂನಾ, ಅಹಮದಬಾದ್ ನಗರಗಳಿಗೆ ಉಡಾನ್ ೩ ಯೋಜನೆ ಅಡಿಯಲ್ಲಿ ವಿಮಾನ ಸಂಪರ್ಕ ಸದ್ಯದಲ್ಲೆ ಆರಂಭವಾಗಲಿದೆ ಎಂದು ಹೇಳಿದರು. ನೂರು ಕಿಮೀ ಅಂತರದಲ್ಲೆÃ ಹುಬ್ಬಳ್ಳಿ ಮತ್ತು ಕೊಲ್ಲಾಪುರದಲ್ಲಿ ಈಗಾಗಲೇ ಉಡಾನ್ ಯೋಜನೆ ಜಾರಿಯಿದ್ದಾಗಲೂ ಬೆಳಗಾವಿಗೆ ಉಡಾನ್ ಯೋಜನೆ ಕೇಂದ್ರ ಸರ್ಕಾರದಿಂದ ದೊರತಿದೆ. ಇದರಲ್ಲಿ ಸಂಸದರ ಶ್ರಮ ಪ್ರಮುಖವಾಗಿದೆ ಎಂದು ಶಾಸಕರು ಹೇಳಿದರು.ಸುದ್ದಿಗೋಷ್ಟಿಯಲ್ಲಿ ಸಂಸದ ಸುರೇಶ ಅಂಗಡಿ , ರಾಜೇಂದ್ರ ಹರಕುಣಿ ಇದ್ದರು.

loading...