ಸಾಹಿತಿ ದಿ.ಬಿಜಿಎಲ್ ಸ್ವಾಮಿ ಜನ್ಮಶತಾಮನೋತ್ಸವ

0
0
loading...

 

ವಿಜಯಪುರ: ವಿಜಯಪುರದ ಪದ್ಮಾಂಜಲಿ ಶಾಲೆಯಲ್ಲಿ ಬಿಜಿಎಲ್ ಸ್ವಾಮಿ ಜನ್ಮಶತಮಾನೋತ್ಸವ ಪ್ರಯುಕ್ತ ರಂಗ ಪ್ರದರ್ಶನ ನಡೆಯಿತು. ಸಸ್ಯವಿಜ್ಞಾನ ಕ್ಷೆÃತ್ರದಲ್ಲಿ ಹತ್ತಾರು ಸಂಶೋಧನೆಗಳ ಮೂಲಕ ಅನುಪಮ ಸಾಧನೆ ತೋರಿದ ಬಿಜಿಎಲ್ ಸ್ವಾಮಿ ಜಗತ್ತು ಕಂಡ ಶ್ರೆÃಷ್ಠ ಸಸ್ಯವಿಜ್ಞಾನಿ ಹಾಗೂ ಸಾಹಿತಿ ಎಂದು ವಿಶ್ರಾಂತ ಪ್ರಾಚಾರ್ಯ ಡಾ.ವಿ.ಡಿ.ಐಹೊಳ್ಳಿ ಹೇಳಿದರು.
ವಿಜಯಪುರದ ಪದ್ಮಾಂಜಲಿ ಶಾಲೆಯಲ್ಲಿ ನಡೆದ ಖ್ಯಾತ ಸಸ್ಯವಿಜ್ಞಾನಿ, ಖ್ಯಾತ ಸಾಹಿತಿ ದಿ.ಬಿಜಿಎಲ್ ಸ್ವಾಮಿ ಜನ್ಮಶತಾಮನೋತ್ಸವ ಪ್ರಯುಕ್ತ ಏರ್ಪಡಿಸಲಾಗಿದ್ದ ಉಪನ್ಯಾಸ ಹಾಗೂ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಬಿಜಿಎಲ್ ಸ್ವಾಮಿ ಅವರ ಕೊಡುಗೆಗಳ ಕುರಿತು ಉಪನ್ಯಾಸ ನೀಡಿದ ಅವರು, ಸಸ್ಯ ವಿಜ್ಞಾನ ಕ್ಷೆÃತ್ರದಲ್ಲಿ ಹಲವಾರು ಸಂಶೋಧನಾ ಪ್ರಬಂಧ, ಗ್ರಂಥಗಳನ್ನು ರಚಿಸಿ ಅನೇಕ ಹೊಸ ಸಂಗತಿಗಳನ್ನು ಜಗತ್ತಿಗೆ ತಿಳಿಸಿಕೊಟ್ಟರು. ಸಸ್ಯ ವಿಜ್ಞಾನದಂತೆ ಸಾರಸ್ವತ ಕ್ಷೆÃತ್ರಕ್ಕೂ ಬಿಜಿಎಲ್ ಸ್ವಾಮಿ ನೀಡಿದ ಕೊಡುಗೆ ಅಪಾರ, ಅವರ ತಂದೆಯಂತೆಯೇ ಸಾರಸ್ವತ ಲೋಕವನ್ನು ಬೆಳಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಸೇರಿದಂತೆ ಹತ್ತಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಬಿಜಿಎಲ್ ಸ್ವಾಮಿ ಭಾಜನರಾಗಿದ್ದರು. ಸಸ್ಯವಿಜ್ಞಾನವನ್ನು ಬೋಧಿಸುತ್ತಿರುವ ವಿಶ್ವದ ಎಲ್ಲ ವಿಶ್ವವಿದ್ಯಾಲಯಗಳ ಪಠ್ಯಗಳಲ್ಲಿ ಬಿ.ಜಿ.ಎಲ್ ಸ್ವಾಮಿ ಅವರ ಹೆಸರಿರುವುದು ಹೆಮ್ಮೆಯ ಸಂಗತಿ ಎಂದರು. ಇಂತಹ ಮಹನೀಯರ ಆದರ್ಶ ಬದುಕನ್ನು ಇಂದಿನ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪದ್ಮಾಂಜಲಿ ಶಾಲೆಯ ಅಧ್ಯಕ್ಷ ಡಾ.ಜಿ.ಟಿ.ಪಾಟೀ ಮಾತನಾಡಿ, ಪರಿಸರ ರಕ್ಷಣೆಯ ಕಾರ್ಯ ನಮ್ಮೆಲರ ಜವಾಬ್ದಾರಿಯಾಗಿದೆ. ನಾಳಿನ ನಾಗರಿಕರಾಗಿರುವ ಮಕ್ಕಳು ಪರಿಸರ ರಕ್ಷಣೆಯ ಮಹತ್ವವನ್ನು ಅರಿಯಬೇಕು ಎಂದು ಕರೆ ನೀಡಿದರು.
ರಂಗ ನಿರ್ದೇಶಕ ಶಿವಾನಂದ ಇಂಗಳೇಶ್ವರ ಮಾತನಾಡಿದರು. ವಿಶ್ರಾಂತ ಪ್ರಾಚಾರ್ಯ ವ್ಹಿ.ಎಂ.ಸುರಪುರ, ಡಾ.ವಿ.ವಿ.ಮಳಗಿ, ಮುಖ್ಯಗುರುಮಾತೆ ಆರ್.ಆರ್.ಕೋರೆ ಉಪಸ್ಥಿತರಿದ್ದರು.

ನಾಗೇಶ ಹೆಗಡೆ ರಚನೆಯ, ಶಿವಾನಂದ ಇಂಗಳೇಶ್ವರ ನಿರ್ದೇಶನದ ಬಿ.ಜಿ.ಎಲ್ ಪ್ರಸಂಗ ಹಾಗೂ ಪಿಲ್ಟರ್ ಮರಳಯ್ಯ ನಾಟಕ ಪ್ರದರ್ಶನ ನಡೆಯಿತು.

loading...