ಸುಪ್ರೀಂ ಕೋರ್ಟ್ ಆದೇಶ ; ಕ್ಯಾರೇ ಅನ್ನದೇ ಪಟಾಕಿ ಸಿಡಿಸಿದ ಜನತೆ

0
1
loading...

ಸುಪ್ರೀಂ ಕೋರ್ಟ್ ಆದೇಶ ; ಕ್ಯಾರೇ ಅನ್ನದೇ ಪಟಾಕಿ ಸಿಡಿಸಿದ ಜನತೆ

ಕನ್ನಡಮ್ಮ ಸುದ್ದಿ- ಬೆಳಗಾವಿ; ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸಲು ಸುಪ್ರೀಂ ಕೋರ್ಟ್‌ ಸಮಯ ನಿಗದಿಪಡಿಸಿದ್ದ ಗಡುವಿಗೆ ನಾಗರಿಕರು ಹೆಚ್ಚು ಗಮನ ಕೊಡದೆ ಪಟಾಕಿ ಸಿಡಿಸುವುದರಲ್ಲಿ ಮಗ್ನರಾಗಿದ್ದಾರೆ.

ಬುಧವಾರ ರಾತ್ರಿ 12 ಗಂಟೆಯವರೆಗೂ ಪಟಾಕಿ ಸದ್ದು ನಗರದಲ್ಲಿ ಕೇಳಿ ಬಂದಿತು.

ರಾತ್ರಿ 8 ಗಂಟೆ ಬಳಿಕ ಪಟಾಕಿ ಸಿಡಿಸಬೇಕು ಎಂಬ ಆದೇಶದಂತೆ ಪ್ರಾರಂಭ ಮಾತ್ರ ಹೆಚ್ಚು ಕಡಿಮೆ ರಾತ್ರಿ ಏಂಟು ಗಂಟೆಯಿಂದಲೇ ಪ್ರಾರಂಭವಾಯಿತು ಆದರೆ ಮುಕ್ತಾಯ ಮಾತ್ರ 12 ಗಂಟೆಗೂ ಆದೇಶಕ್ಕೆ ಕ್ಯಾರೇ ಎನ್ನದೆ ಪಟಾಕಿ ಸಿಡಿಸಿದ್ದಾರೆ.

ಸಂಜೆ ಅಂಗಡಿ, ಮಳಿಗೆಗಳಲ್ಲಿ ಲಕ್ಷ್ಮಿ ಪೂಜೆ ಮುಗಿಸಿದ ವರ್ತಕರು ನೇರವಾಗಿ ರಸ್ತೆಗೆ ಬಂದು ಪಟಾಕಿ ಸಿಡಿಸುವುದರಲ್ಲಿ ನಿರತರಾದದ್ದು ಕಂಡು ಬಂದಿತು.

ಸಂಜೆ 8 ಗಂಟೆಗೆ ಮುಂಚಿತವಾಗಿಯೇ ಪಟಾಕಿ ಅಬ್ಬರ ಕಂಡು ಬಂದಿತು. ರಾತ್ರಿ 8 ರಿಂದ 10 ಗಂಟೆ ಒಳಗಾಗಿ ಪಟಾಕಿ ಸಿಡಿಸಬೇಕು ಎಂಬ ಸುಪ್ರೀಂ ಆದೇಶವನ್ನು ಜನರು ಪಾಲಿಸುವಂತೆ ಕ್ರಮ ಕೈಗೊಳ್ಳವ ಬಗ್ಗೆ ಹಾಗೂ ಆ ಕುರಿತು ಜನಜಾಗೃತಿ ಮೂಡಿಸುವ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಆಸಕ್ತಿ ಹಾಗೂ ಕ್ರಮ ವಹಿಸಿರಲಿಲ್ಲ ಎಂಬುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಜನರು ಸಹ ನ್ಯಾಯಾಲಯದ ಆದೇಶಕ್ಕೆ ಕ್ಯಾರೇ ಅನ್ನದೇ ಪಟಾಕಿ ಸಿಡಿಸುವ ಮೂಲಕ ದೀಪಾವಳಿ ಹಬ್ಬ ಆಚರಿಸಿದ್ದಾರೆ.

loading...