ಹೆದಿಗೆಟ್ಟ ರಸ್ತೆ ಗ್ರಾಮಕ್ಕೆ ಬಾರದ ಬಸ್: ಸಾರ್ವಜನಿಕರ ಪರದಾಟ

0
0
loading...

ಆಲಮೇಲ: ಪಟ್ಟಣದ ಕಡಣಿ ರಸ್ತೆಯಲ್ಲಿರುವ ತಮೀಳುನಾಡಿನ ಮೂಲದ ಕೆಪಿರ್ ಸಕ್ಕರೆ ಕಾರಖಾನೆ ಪ್ರಾರಂಬವಾದರೆ ಸಾಕು ಕಡಣಿ ರಸ್ತೆ ಸಂಪೂರ್ಣವಾಗಿ ಹದಿಗೆಟ್ಟು ಹೋಗುತ್ತದೆ ಇದರಿಂದ ರಸ್ತೆ ಸರಿ ಇಲ್ಲಾ ಎಂದು ಸರಕಾರಿ ಸಾರಿಗೆ ಸಂಸ್ಥೆಯ ಚಾಲಕರು ಕಡಣಿ,ತಾರಾಪೂರ ಹಾಗೂ ತಾವರಖೇಡ ಗ್ರಾಮಕ್ಕೆ ಬಸ್ ಬಿಡಲು ಆಗುವದಿಲ್ಲ ಎಂದು ಹೇಳಿದ್ದಾರೆ ಇದರಿಂದ ನಮ್ಮ ಮಕ್ಕಳಿಗೆ ಶಾಲೆಗೆ ಹೋಗಲು ತೊಂದರೆ ಆಗುತ್ತಿದ್ದೆ ಆದರಿಂದ ಕೂಡಲೇ ರಸ್ತೆ ಸುಧಾಹರಣೆ ಮಾಡಿಸಿ ಬಸ್ ಬರುವ ಹಾಗೆ ಮಾಡಬೇಕು ಎಂದು ಮೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಾರಖಾನೆ ಪ್ರಾರಂಬವಾಗಿ ೬ರಿಂದ ೭ವರ್ಷ ಆಗಿದ್ದು ಪ್ರತಿವರ್ಷ ಕಬ್ಬು ನೂರಿಸುವ ವೇಳೆ ಕಾರಖಾನೆಗೆ ಬರುವ ಕಬ್ಬಿನ ಟ್ಯಾಕ್ಟರ್‌ನಿಂದ ರಸ್ತೆ ಹಾಲಾಗುತ್ತಿದ್ದೆ, ರಸ್ತೆ ಸುಧಾಹರಣೆಗೆ ಕಾರಖಾನೆ ಹಾಗೂ ಸರಕಾರದವರೂ ಯಾವದೇ ಶಾಶ್ವತ ಪರಿಹಾರ ಮಾಡುತ್ತಿಲ್ಲ, ಕಡಣಿ,ತಾರಾಪೂರ ಹಾಗೂ ತಾವರಖೇಡ ಗ್ರಾಮಸ್ತರು ಆಲಮೇಲ ಪಟ್ಟಣವನ್ನೆÃ ಅವಲಂಬಿಸಿದ್ದು ಪ್ರತಿ ದಿನ ಈ ಮೂರು ಗ್ರಾಮದ ನೂರಾರು ಜನರು ಆಲಮೇಲಕ್ಕೆ ಹೋಗುತ್ತಾರೆ ,ಅಲ್ಲದೇ ಈ ಮೂರು ಗ್ರಾಮದಿಂದ ನೂರಾರು ವಿದ್ಯಾರ್ಥಿಗಳು ಶಾಲೆಗೆ ಹಾಗೂ ಕಾಲೇಜಿಗೆ ಹೋಗುತ್ತಾರೆ ಇವರೆಲ್ಲರೂ ಬಸ್ ಪಾಸ್ ಹೊಂದಿದ್ದು ಈಗ ಬಸ್ ಬಾರದೆ ಒಂದು ವಾರವಾಗಿದೆ ಹೀಗಾಗಿ ಮಕ್ಕಳು ಶಾಲೆಗೆ ಹೋಗಲು ಆಗುತ್ತಿಲ್ಲ.
ಈ ಕುರಿತು ಚಾಲಕರಿಗೆ ಕೆಳಿದರೆ ನಾಮ್ಮಗೆ ಕಬ್ಬಿನ ಟ್ಯಾಕ್ಟರ್‌ಗಳ ತೊಂದರೆ ಆಗುತ್ತಿದ್ದು ಅವರು ಮನಬಂದತೆ ಟ್ಯಾಕ್ಟರ್ ಓಡಿಸುತ್ತಾರೆ,ಪೂಲ್ ಸೌಂಡ ಟೇಪ್ ಹಚ್ಚುತ್ತಾರೆ, ಅಲ್ಲದೆ ರಸ್ತೆ ಹದಗೆಟ್ಟಿದ್ದು ಚಿಕ್ಕದಾಗಿದೆ ಕೆಪಿಆರ್ ಕಾರಖಾನೆಯ ವರೆಗೆ ನಮ್ಮಗೆ ದಿನಾಲು ತೊಂದರೆ ಆಗುತ್ತಿದೆ ಹೀಗಾಗಿ ನಾವು ನಮ್ಮ ಮೇಲಾಧಿಕಾರಿಗಳಿಗೆ ಮೂರು ತಿಂಗಳು ಬಸ್ ಓಡಿಸಲು ಆಗುವದಿಲ್ಲ ಎಂದು ತಿಳಿಸಿದ್ದೆವೆ ನಿಮ್ಮೂರಿಗೆ ಮೂರು ತಿಂಗಳು ಬಸ್ ಬರುವದಿಲ್ಲ ಎಂದು ಹೇಳುತ್ತಿದ್ದಾರೆ ಹಾಗಾದರೆ ನಮ್ಮ ಗ್ರಾಮದ ಮಕ್ಕಳು ಶಾಲೆಗೆ ಹೋಗುವದು ಹೇಗೆ ಕೂಡಲೇ ಸಂಬಂದ ಪಟ್ಟಣ ಸಾರಿಗೆ ಇಲಾಖೆಯ ಅಧಿಕಾರಿಗಳು ಮೂರು ಗ್ರಾಮಗಳಿಗೆ ಬಸ್ ಬರುವಹಾಗೆ ಮಾಡಬೇಕು ಎಂದು ತಾರಾಪೂರ ಗ್ರಾಮಸ್ಥರಾದ ಶಿವಾನಂದ ದುದ್ದಣಗಿ ಆಗ್ರಹಿಸಿದ್ದಾರೆ.
ಕೆಪಿಆರ್ ಕಾರಖಾನೆಯಿಂದ ಹಾಲಾಗುತ್ತಿರುವ ರಸ್ತೆಯಿಂದ ನೂರಾರು ಮಕ್ಕಳು ಶಾಲೆಗೆ ಹೋಗುವದು ಬಿಡುವ ಸ್ಥಿತಿ ನಿರ್ಮಾಣವಾಗಿದ್ದು ಕೂಡಲೇ ಅದನು ತಾಲೂಕು ಅಧಿಕಾರಿಗಳು ರಸ್ತೆ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ಒದಗಿಸಬೇಕು ಅಲ್ಲದೆ ಈಗ ವಿಧ್ಯಾರ್ಥಿಗಳ ಹಿತದೃಷ್ಠಿಯಿಂದ ಬಸ್ ಸೌಲಭ್ಯ ಒದಗಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ವಿಧ್ಯಾರ್ಥಿಗಳಿಂದ ಪ್ರತಿಭಟನೆ ಮಾಡಬೇಕ್ಕಾಗುತ್ತದೆ ಎಂದು ವಿಧ್ಯಾರ್ಥಿಗಳ ಪಾಲಕರು ಎಚ್ಚರಿಕೆ ನೀಡಿದ್ದಾರೆ.

loading...