ಹೊಲಗಳಿಗೆ ನೀರು ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೆÃನೆ: ಶಾಸಕ ಎ.ಎಸ್.ಪಾಟೀಲ

0
0
loading...

ನಾಲತವಾಡ: ನಿಮ್ಮಲರ ಹೊಲಗಳಿಗೆ ನೀರು ಬಂದರೆ ಭಂಡಾರದ ಬಣ್ಣ ಬಂಗಾರದ ಬಣ್ಣವಾಗುತ್ತದೆ ಈ ದೆಸೆಯಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೆÃನೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಸಮೀಪದ ಅಡವಿ ಹುಲಗಬಾಳ ಬೀರಪ್ಪನ ಬೆಟ್ಟದಲ್ಲಿ ಬೀರಲಿಂಗೇಶ್ವರ, ಮಾಳಿಂಗರಾಯ ಮತ್ತು ಸಿಡಿಯಾನ ದ್ಯಾಮವ್ವನ ಜಾತ್ರೆಯ ನಿಮತ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹಗಳ ಕಾರ್ಯಕ್ರಮದಲ್ಲಿ ಕಂಬಳಿ ಸನ್ಮಾನ ಸ್ವಿÃಕರಿಸಿ ಅವರು ಮಾತನಾಡಿದರು.

ಇಂತಹ ಸುಕ್ಷೆÃತ್ರ ಭಾಗದಲ್ಲಿ ಕುಡಿಯಲು ನೀರಿಲ್ಲ, ಪಕ್ಕದಲ್ಲೆÃ ಜಮೀನುಗಳನ್ನು ಜಲಾಶಯಕ್ಕೆ ಕಳೆದುಕೊಂಡ ರೈತರಿಗೆ ನೀರಿಲ್ಲ, ರೈತರ ಹೊಲಗಳಿಗೆ ನೀರು ಕೊಡುವ ನಿಟ್ಟಿನಲ್ಲಿ ಹಂತ ಹಂತವಾಗಿ ಪ್ರಾರಂಭ ಮಾಡುತ್ತೆÃನೆ ಸುತ್ತ ಮುತ್ತ ಬರುವ ೫ ಕೆರೆಗಳನ್ನು ತುಂಬಿಸುವ ಕೆಲಸ ಮಾಡುತ್ತೆÃನೆ, ನಿಮ್ಮೆಲರ ಬದುಕು ಬಂಗಾರವಾಗಬೇಕಾದರೆ ಕುಡಿಯವ ಚಟುವಟಿಕೆಗಳಿಂದ ದೂರ ಉಳಿಯಬೇಕು ಹಳ್ಳಿಗಳಲ್ಲಿ ಹೆಚ್ಚು ಸಾರಾಯಿ ಪ್ರಿÃಯರಾಗುತಿದ್ದಾರೆ, ದಯವಿಟ್ಟು ಜನರು ಸಾರಾಯಿಯಿಂದ ದೂರ ಉಳಿಯಬೇಕು, ನನ್ನ ಅಧಿಕಾರ ಅವಧಿಯಲ್ಲಿ ತಾಲೂಕಿನ ಪ್ರತಿ ಗ್ರಾಮಕ್ಕೆ ನೀರು ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೆÃನೆ ಎಂದರು. ಬಿಜೆಪಿ ಧುರಿಣ ಶಿವಶಂಕರಗೌಡ ಹಿರೇಗೌಡ ಮಾತನಾಡಿ ಸಾಮೂಹಿಕ ವಿವಾಹಗಳನ್ನು ಕಳೆದ ೨೦ ವರ್ಷಗಳಿಂದ ಹಮ್ಮಿಕೊಳ್ಳುತ್ತಾ ಬಂದ ಶ್ರಮ ಜೀವಿ ನಿಂಗಣ್ಣ ಬಪ್ಪರಗಿ ಸೇವೆ ಶ್ಲಾಘನೀಯ ಎಂದರು.
ಜಿ.ಪಂ ಉಪಾಧ್ಯಕ್ಷರಾದ ಪ್ರಭು ದೇಸಾಯಿ ಮಾತನಾಡಿ ಕಳೆದ ೨೦ ವರ್ಷಗಳಿಂದ ಈ ಸ್ಥಳದಲ್ಲಿ ಸಾಮೂಹಿಕ ವಿವಾಹಗಳು ನಡೆಯುತ್ತಲೇ ಇದ್ದು ಈ ಕ್ಷೆÃತ್ರಕ್ಕೆ ಸರಿಯಾದ ರಸ್ತೆ ಇಲ್ಲ, ಇದು ನಾಚಿಕೆ ವಿಷಯ, ಮೊದಲು ರಸ್ತೆ ದುರಸ್ಥಿ ಮಾಡಿ ನಂತರ ಆಚರಣೆ ಮಾಡಿ, ಪ್ರತಿ ವರ್ಷವೂ ಬೇರೆ ಬೇರೆ ರಾಜಕೀಯ ನಾಯಕರು ಬರುತ್ತಿದ್ದಾರೆ, ಹಾಲುಮತ ಸಮಾಜದವರು ರಾಜಕೀಯವಾಗಿ ಮುಂದೆ ಬರಬೇಕು, ನೀವು ಮುಂದೆ ಬರದೇ ಹೋದಲ್ಲಿ ಮತ್ತೆ ನಾಡಗೌಡ ಅಥವಾ ನಡಹಳ್ಳಿ ಯವರೇ ಶಾಸಕರಾಗುತ್ತಾರೆ ವಿಚಾರ ಮಾಡಿ ಎಂದರು.

ತಪಾಷಣೆ: ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹಗಳಲ್ಲಿ ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ನಾಲತವಾಡ ಸಮೂದಾಯ ಆರೋಗ್ಯ ಕೇಂದ್ರದ ಡಾ.ಸಿ.ಬಿ.ವಿರಕ್ತಮಠ, ಎಸ್.ಎಸ್.ಮೇಟಿ, ಪಿಡಿಓ ಪಿ.ಎಸ್.ಬಿರಾದಾರ,ಕಂದಾಯ ಇಲಾಖೆಯ ಪವನ್, ಮುನ್ನಾ ಹೊನ್ನುಟಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿÃಚಾರಕಿ ಕಮಲಾಬಾಯಿ ಲಮಾಣಿ, ಸಮಾಜ ಕಲ್ಯಾಣ ಇಲಾಖೆಯ ಎಸ್.ಎಚ್.ಜೈನಾಪೂರ ಹಾಗೂ ರಾಮನಗೌಡ ನೀರಲಗಿ ತೀವ ತಪಾಷಣೆ ಕಾರ್ಯ ಕೈಗೊಂಡಿದ್ದರು. ವೇದಿಕೆಯಲ್ಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಸರೂರಿನ ಗುರುಮಹಾಂತ ಸ್ವಾಮೀಗಳು,ಸೋಮೇಶ್ವರ ಅಮೋಘಸಿದ್ದೆÃಶ್ವರ ಸಿದ್ದಯೋಗಾ ಬಸವನಸಂಗೋಗಿ ಆಶ್ರಮದ ಸಿದ್ದರತ್ನ ಮುರಗೊಂಡ ಮಹಾರಾಜರು, ಹರಳಿಚಂಡಿಯ ಪರಮಾನಂದ ಮಹಾಸ್ವಾಮೀಗಳು,ಸರೂರ ಪೀಠದ ಸಿದ್ದಯ್ಯ ಗುರವಿನ, ಯಮನಪ್ಪ ಅಬ್ಯಾಳ, ಚವನಬಾವಿಯ ನೀಲಮ್ಮ ತಾಯಿ, ಶಿಪುತ್ರಮ್ಮ ತಾಯಿ, ಜಿ.ಪಂ ಸದಸ್ಯ ಬಸವನಗೌಡ ವಣಕ್ಯಾಳ,ಬಬಲುಗೌಡ ನಾಯಕ, ಜಿ.ಪಂ ಉಪಾಧ್ಯಕ್ಷ ಪ್ರಭು ದೇಸಾಯಿ ಇದ್ದರು.

loading...