35 ಪೈಸೆಯಷ್ಟು ಚೇತರಿಕೆ ಕಂಡ ರೂಪಾಯಿ ಮೌಲ್ಯ

0
9
loading...

 

ನವದೆಹಲಿ: ಅತ್ತ ಪೆಟ್ರೋಲ್ ದರ ಇಳಿಕೆಯಾದ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಏರಿಕೆಯಾಗಿದೆ.

ಶುಕ್ರವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ರೂಪಾಯಿ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ. ಡಾಲರ್ ಎದುರು ಇಂದು ರೂಪಾಯಿ ಮೌಲ್ಯದಲ್ಲಿ 35 ಪೈಸೆಯಷ್ಟು ಏರಿಕೆ ಕಂಡುಬಂದಿದೆ. ಪ್ರಮುಖವಾಗಿ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲದರ ಇಳಿಕೆ ಮತ್ತು ಅಮೆರಿಕ ಮಧ್ಯಂತರ ಚುನಾವಣೆ ಹಿನ್ನಲೆಯಲ್ಲಿ ರೂಪಾಯಿ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಂತೆಯೇ ಮಾರುಕಟ್ಟೆಯಲ್ಲಿ ಅಮೆರಿಕ ಬ್ಯಾಂಕುಗಳ ವಹಿವಾಟುಗಳು ನಿರೀಕ್ಷಿತ ಮಟ್ಟ ತಲಪುದೇ ಇರುವುದೂ ಕೂಡ ರೂಪಾಯಿ ಮೌಲ್ಯ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.

loading...