ಅಧಿವೇಶನಕ್ಕೆ ಸರಕಾರ ಬೇಕಾಬಿಟ್ಟಿ ದುಂದು ವೆಚ್ಚ:ಗಡಾದ ಗಂಭೀರ ಆರೋಪ

0
15
loading...

*ಅಧಿವೇಶನಕ್ಕೆ ಸರಕಾರ ಬೇಕಾಬಿಟ್ಟಿ ದುಂದು ವೆಚ್ಚ:*ಗಡಾದ ಗಂಭೀರ ಆರೋಪ*

ಕನ್ನಡಮ್ಮ ಸುದ್ದಿ-ಬೆಳಗಾವಿ: ಉತ್ತರ ಕರ್ನಾಟಕದ ಯಾವುದೇ ಜಲ್ವಂತ ಸಮಸ್ಯೆ ಬಗ್ಗೆ ಚರ್ಚೆ ನಡೆಸದೆ ಕಳೆದ  10 ದಿನದ  ಅಧಿವೇಶನಕ್ಕೆ ಸರಕಾರ 2157. 14 ಲಕ್ಷ ಹಣ ವನ್ನು  ಮಾಡಿದೆ  ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದರು.

ಇಂದು ನಗರದಲ್ಲಿ ಮಾಧ್ಯಮದ  ಜೊತೆ ಮಾತನಾಡಿದ ಅವರು.

ಶಾಸಕರು ಹಾಗೂ ಗಣ್ಯರ ವಸತಿ ವೆಚ್ಚ. 497 ಲಕ್ಷ ಮುಖ್ಯ ಮಂತ್ರಿ ಸೇರಿ ನಾಲ್ವರ ಸಚಿವರ ವೆಚ್ಚ 24 ಲಕ್ಷ ಹಾಗೂ  ಅಧಿವೇಶನದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಶಾಸಕರಿಗೆ 2000 ರೂ ದಿನದ ಭತ್ಯೆ ನೀಡಲಾಗಿದೆ ಮತ್ತು ಉಪಹಾರ ಭತ್ಯೆಗಳ ಸಲುವಾಗಿ ಒಟ್ಟು 72,10,250 ರೂ ವೆಚ್ಚದ ಹಣವನ್ನು
ಸಾರ್ವಜನಿಕರ ತೆರಿಗೆ ಹಣ  ಭರಿಸಲಾಗಿದೆ ಎಂದು ಗಂಭೀರ ಆರೋಪಸಿದರು.

ಇಷ್ಟು ದೊಡ್ಡ ಮೊತ್ತದ ಹಣ ವೆಚ್ಚ ಮಾಡಿ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸದಿಯಿರುವುದು ಎಷ್ಟು ಸರಿ? ಅಧಿವೇಶನ ಮುಗಿದ ಬಳಿಕ ಖರ್ಚೆಗಳ ಬಗ್ಗೆ ಬಹಿರಂಗ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರ.

loading...