ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದ ವಾತಾವರಣ ಬೆಳೆಸಿ: ವಿದ್ಯಾವತಿ

0
4
loading...

ವಿಜಯಪುರ: ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದ ವಾತಾವರಣ ಬೆಳೆಸಬೇಕು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಎಚ್.ಬಿ. ಹೇಳಿದರು.
ನಗರದ ಅಂಜುಮನ್ ಪ್ರೌಢಶಾಲೆಯ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಅಂಜುಮನ್ ಶಿಕ್ಷಣ ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆದ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದ ವಾತಾವರಣ ಬೆಳೆಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಕನ್ನಡ ನಾಡು ನುಡಿ ಸೇವೆಗೆ ಸದಾ ಬದ್ಧವಾಗಿರುವ ಇಲಾಖೆಯು ಹಲವಾರು ಸಾಹಿತ್ಯ ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತಲೇ ಇರುತ್ತವೆ. ಸಾರ್ವಜನಿಕರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಅಬ್ದುಲ್ ಡೋಣಿವಾಲೆ ಕುರ್‍ಆನ್ ಪಠಣೆ ಮಾಡಿದರು. ಸರಸ್ವತಿ ಭಗವದ್ಗೀತೆ ವಾಚಿಸಿದರು. ಅನ್ನಪೂರ್ಣ ರಾಠೋಡ ನಾಡಗೀತೆ ಹೇಳಿದರು.

ಕವಿಗೋಷ್ಠಿಯಲ್ಲಿ ಶೇಷರಾವ ಮಾನೆ, ಡಾ.ಅಮೀರುದ್ದೀನ್ ಖಾಜಿ, ಡಾ.ಸುಜಾತಾ ಚಲವಾದಿ, ಡಾ.ಎಚ್.ಬಿ. ನಡುವಿನಕೇರಿ, ಪ್ರೊ. ಯುವರಾಜ ಮಾದನಶೆಟ್ಟಿ, ಡಾ.ಶಾರದಾಮಣಿ ಹುನಶ್ಯಾಳ, ಪ್ರೊ.ಸುಭಾಸಚಂದ್ರ ಕನ್ನೂರ, ಎಸ್.ವಿ. ಬಿರಾದಾರ, ಡಾ.ಕಾಂತು ಇಂಡಿ, ಪ್ರೊ. ಸುನಂದಾ ಗುಡದೂರ, ರಮೇಶ ಬಸರಗಿ, ರಜಿಯಾಬೇಗಂ ದಿಡ್ಡಿಮನಿ ಮುಂತಾದವರು ಕವಿತೆಗಳನ್ನು ವಾಚಿಸಿದರು.

loading...