ಉ.ಕ ಅಭಿವೃದ್ಧಿಗೆ ಪಕ್ಷಾತೀತ ಹೋರಾಟ ನಡೆಯಬೇಕು : ಹುಕ್ಕೇರಿಯ ಶ್ರೀ

0
1
ಉ.ಕ ಅಭಿವೃದ್ಧಿಗೆ ಪಕ್ಷಾತೀತ ಹೋರಾಟ ನಡೆಯಬೇಕು : ಹುಕ್ಕೇರಿಯ ಶ್ರೀ
ಕನ್ನಡಮ್ಮ ಸುದ್ದಿ-ಬೆಳಗಾವಿ: ಸಿಎಂ ಅಖಂಡ ಕರ್ನಾಟಕದ ಕನಸ್ಸು ಕಾಣುವುದಾದರೆ ೧೦ ರಿಂದ ಪ್ರಾರಂಭವಾಗುವ ಅಧಿವೇಶನದಲ್ಲಿ ಒಂಬತ್ತು ಕಚೇರಿ ಸ್ಥಳಾಂತರ, ಬೆಳಗಾವಿ ಎರಡನೇ ರಾಜ್ಯಧಾನಿಯಾಗಿ ಘೋಷಣೆ, ಮಾಡಬೇಕು ಇಲ್ಲವಾದರೆ ಮುಂದೆ ಏನೇ ನಡೆದರು ನೇರವಾಗಿ ಸರ್ಕಾರವೇ ಹೊಣೆಯಾಗಲಿದೆ ಎಂದು ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಕರ್ನಾಟಕ ಅಭಿವೃದ್ಧಿ ಉದ್ದೆÃಶದಿಂದ ನಮ್ಮ ಮೂರು ಬೇಡಿಕೆಗಳಾದ ಸುವರ್ಣಸೌಧ ಆಡಳಿತಾತ್ಮಕ ಶಕ್ತಿ ಕೇಂದ್ರವಾಗಬೇಕು, ಕಾರ್ಯದರ್ಶಿ ಮಟ್ಟದ ಇಲಾಖೆಗಳನ್ನು ಸ್ಥಳಾಂತರ, ಬೆಳಗಾವಿ ರಾಜ್ಯದ ಎರಡನೇ ರಾಜದಾನಿಯನ್ನಾಗಿಸಬೇಕು ಎಂಬ ಹೋರಾಟ ಹಿನ್ನಲೆಯ ಸಿಎಂ ಅವರು ಸಕಾರಾತ್ಮಕವಾಗಿ ಸ್ಪಂಧಿಸಿದ್ದರು. ಆದರೆ ಇಲ್ಲಿಯವರಿಗೂ ಯಾವುದು ಕಾರ್ಯ ರೂಪಕ್ಕೆ ಬಂದಿಲ್ಲ. ಬೆಳಗಾವಿಯಲ್ಲಿ ನಡೆಯುವ ೧೦ ದಿನದ ಅಧಿವೇಶನದ ಒಳಗಾಗಿ ಕಾರ್ಯರೂಪಕ್ಕೆ ಬರದಿದ್ದರೆ. ಉಗ್ರ ಹೋರಾಟ ನಡೆಸಲಾಗುತ್ತದೆ. ಮುಂದೆ ಯಾವುದೇ ಅನಾಹುತಗಳಾದರು ಅದಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ವಿಕಾಸ ವೇದಿಕೆ ಅಧ್ಯಕ್ಷ ಅಶೋಕ ಪೂಜಾರಿ , ಉತ್ತರ ಕರ್ನಾಟಕ ಸಮಿತಿ, ಬೀಮಪ್ಪಾ ಗಡಾದ, ಶಿವಾನಂದ ಶ್ರಿÃಗಳು ಸೇರಿದಂತೆ ಇತರರು ಇದ್ದರು.
loading...