ಕನ್ನಡ ಸಾಹಿತ್ಯ ಲೋಕ ಅಪಾರ ಶ್ರೀಮಂತ : ವೀಣಾ

0
6
loading...

ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ

ಬಾಗಕೋಟ: ಕನ್ನಡ ಸಾಹಿತ್ಯ ಲೋಕದಲ್ಲಿ ಅಪಾರ ಪ್ರಮಾಣದ ಬೇರೆ ಬೇರೆ ರೀತಿಯ ಸಾಹಿತ್ಯಗಳು ಬೇರೆ ಬೇರೆ ಲೇಖಕರು ರಚನೆ ಮಾಡಿದ್ದು, ಅದು ಅಪಾರ ಶ್ರೀಮಂತವಾಗಿದೆ ಎಂದು ಬಾಗಲಕೋಟ ಜಿಲ್ಲಾ ಪಂಚಾಯತ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.
ಇಳಕಲ್‍ನ ಗೊಂಗಡಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆದ ಇಳಕಲ್ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಭಾಗದಲ್ಲಿಯೂ ಸಹ ಹಲವಾರು ಸಾಹಿತಿಗಳು ಕಥೆ ಕವನ ಕಾದಂಬರಿಗಳನ್ನು ರಚಿಸಿದ್ದಾರೆ. ಅಂತವರಲ್ಲಿ ಲಲಿತಾ ಹೊಸಪ್ಯಾಟಿ ಒಬ್ಬರಾಗಿದ್ದಾರೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಡಾ.ಶಂಭು ಬಳಿಗಾರ, ಜಿಲ್ಲಾ ಪಂಚಾಯತ ಸದಸ್ಯೆ ಚಂದವ್ವ ಓಲೇಕಾರ, ಪಿ,ವಿ,ದೇಶಾಯಿ, ಎಂ,ಜಿ,ಪಟ್ಟಣಶೆಟ್ಟರ, ಅಮರೇಶ ಕೌದಿ, ಜಿ,ಪಿ,ಪಾಟೀಲ, ಸುಭಾಷಚಂದ್ರ ಕಠಾರಿಯಾ, ಎಂ,ವಿ,ಪಾಟೀಲ, ಕೆ,ಎಚ್,ಕಂದಿಕೊಂಡ, ದಿಲೀಪ ದೇವಗಿರಿಕರ, ತಿಮ್ಮಣ್ಣ ಬೋಗಾಪೂರ, ಮಲ್ಲಣ್ಣ ಭಮಸಾಗರ, ವೈಶಾಲಿ ಘಂಟಿ, ಮಹಾಂತೇಶ ಕರ್ಜಗಿ ಆಗಮಿಸಿದ್ದರು.

ನಗರದ ಸಮಸ್ತ ಸಂಗೀತ ಕಲಾವಿದರಿಂದ ಪ್ರಾರ್ಥನೆ ಮಾಡಲಾಯಿತು. ತಾಲೂಕಾ ಅಧ್ಯಕ್ಷ ಸಂಗಣ್ಣ ಗದ್ದಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ,ಎಸ್,ಅಡವಿ, ಪ್ರವೀಣ ಮುದಗಲ್ಲ, ಇಂದುಮತಿ ಅಂಗಡಿ ನಿರೂಪಿಸಿದರು. ಮುತ್ತು ಬೀಳಗಿ ವಂದಿಸಿದರು.
ಸಂತಾಪ : ಶನಿವಾರ ನಿಧನರಾದ ಲೇಖಕ ಮೋಹನ ನಾಗಮ್ಮನವರ ಅವರಿಗೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

loading...