ಕೇಂದ್ರ ಬರ ಅಧ್ಯಯನ ಯಾವ ಪುರುಷಾರ್ಥಕ್ಕೆ ರಾಜ್ಯಕ್ಕೆ ಭೇಟಿ ; ಕೋನರೆಡ್ಡಿ

0
22
loading...

ಕೇಂದ್ರ ಬರ ಅಧ್ಯಯನ ಯಾವ ಪುರುಷಾರ್ಥಕ್ಕೆ ರಾಜ್ಯಕ್ಕೆ ಭೇಟಿ ; ಕೋನರೆಡ್ಡಿ

ಕನ್ನಡಮ್ಮ ಸುದ್ದಿ- ಬೆಳಗಾವಿ: ಕೇಂದ್ರ ಸರ್ಕಾರದ ಬರ ಅಧ್ಯಯನ ಕೇಂದ್ರ ರಾಜ್ಯಕ್ಕೆ ಭೇಟಿ ನೀಡಿದ್ದರು.ಎಷ್ಟು ರೈತರಿಗೆ ಪರಿಹಾರ ನೀಡಿದ್ದಾರೆ. ಪ್ರಚಾರಕ್ಕೆ ಬರ ಅಧ್ಯಯನ ಭೇಟಿ ಬೇಡಾಗಿದೆ ಎಂದು ಮಾಜಿ‌ ಶಾಸಕ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕೋನರೆಡ್ಡಿ ಬಿಜೆಪಿ ಹರಿಯಾಯ್ದರು.

ಅವರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ಬೆಳಗಾವಿಯಲ್ಲಿ ಡಿ.10ರಿಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನ ಹೇಗೆ ನಡೆಯುತ್ತದೆನಡೆಯುತ್ತದೆ,ಮುತ್ತಿಗೆ ಹಾಕಲಾಗುತ್ತದೆ ಎನ್ನುವುದನ್ನು ಬಿಟ್ಟು,
ಬಿಜೆಪಿ ಸಭೆಯಲ್ಲಿ ಉ.ಕ ಸಮಸ್ಯೆ ಗಳ ಚರ್ಚಿಸುವ ವಿಷಯಗಳ ಬಗ್ಗೆ ಯೋಚಿಸಿ ಎಂದರು.
ಕುಮಾರಸ್ವಾಮಿ ಸುಳ್ಳು ಗಾರ ಮೋಸಗಾರ ಎಂದು ಹೇಳುತ್ತಾರೆ. ಜನಧನ ಯೋಜನೆಯಲ್ಲಿ ಜನತೆಯ ಖಾತೆ ಹಣ ಹಾಕಲಾಗುತ್ತದೆ ಎಂದು ಮೋದಿ ಹೇಳಿದ್ದರು. ನಾಲ್ಕುವರೆ ವರ್ಷದಲ್ಲಿ ಎಂಎಸ್ ಪಿ ಬಿಟ್ಟರೇ ಏನು ಮಾಡಿಲ್ಲ ,ಅಂದ್ರೆ ಸುಳ್ಳುಗಾರ ಮೋಸಗಾರ‌ ಮೋದಿಯಲ್ಲವೇ ಎಂದು ಪ್ರಶ್ನೇಸಿದರು.

ರಾಜ್ಯ ಸರ್ಕಾರಕ್ಕೆ ಎಷ್ಟು ಅಧಿಕಾರ ಇದೆಯೋ ಅಷ್ಟೇ ಕೇಂದ್ರ ಸರ್ಕಾರ‌ಕ್ಕೂ ಅಧಿಕಾರ ಇದೆ. ಬರ ಅಧ್ಯಯನ ತಂಡ ಭೇಟಿ ನೀಡಿ ಎಷ್ಟು ರೈತರಿಗೆ ಪರಿಹಾರ ನೀಡಿದ್ದಾರೆ. ರಾಜ್ಯಕ್ಕೆ ಕೇಂದ್ರದ ಕೊಡಿಗೆ ಏನೆಂಬುವುದನ್ನು ತಿಳಿಸಲಿ. ಜಗದೀಶ್ ಶೆಟ್ಟರ್, ಶೋಬಾ ,ಈಶ್ವರಪ್ಪ, ಶ್ರೀನಿವಾಸ ಪುಜಾರಿ ಡುಬ್ಲಿಕೇಟ್ ನಾಯರು, ಬಿಜೆಪಿ ನಾಯಕರಿಗೆ ಕನಸ್ಸಿನಲ್ಲಿಯೂ ಸಹ ಕುಮಾರಸ್ವಾಮಿ ಎಂದು ಪರಿತಪಿಸುತ್ತಿದ್ದಾರೆ ಬಿಜೆಪಿ ವಿರುದ್ಧ ಹರಿಹಾಯ್ದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಜೆಡಿಎಸ್ ಮುಖಂಡ ಫೈಜುಲ್ಲಾ ಮಾಡಿವಾಲೆ ಸೇರಿದಂತೆ ಇತರರು ಇದ್ದರು.

loading...