ಪ್ಯಾರೀಸ್ ನಲ್ಲಿ ಹಿಂಸಾತ್ಮಕ ಪ್ರತಿಭಟನೆ

0
4
loading...

ಪ್ಯಾರೀಸ್: ತೆರಿಗೆ ಹೆಚ್ಚಳ ಹಾಗೂ ತಲಾದಾಯದ ಇಳಿಕೆಯ ವಿರುದ್ಧ ಫ್ರಾನ್ಸ್ ರಾಜಧಾನಿ ಪ್ಯಾರೀಸ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಪ್ರತಿಭಟನೆ ವೇಳೆ 133 ಮಂದಿ ಗಾಯಗೊಂಡರೆ 412  ಮಂದಿಯನ್ನು ಬಂಧಿಸಲಾಗಿದೆ ಎಮ್ದು ಪ್ಯಾರೀಸ್ ಪೋಲೀಸರು ಮಾಹಿತಿ ನೀಡಿದ್ದಾರೆ.

ಶನಿವಾರ ನಡೆದ ಪ್ರತಿಭಟನೆಯಲ್ಲಿ 23 ಪೊಲೀಸ್ ಅಧಿಕಾರಿಗಳು ಸಹ ಗಾಯಗೊಂಡಿದ್ದಾರೆ.ಪ್ಯಾರೀಸ್ ನ ಕೇಂದ್ರ ಭಾಗದಲ್ಲಿ ಪ್ರತಿಭಟನೆ, ಹಿಂಸಾಚಾರದ ಕಾವು ತೀವ್ರವಾಗಿದ್ದು  378 ಆರೋಪಿಗಳನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದರು.

ಹಳದಿ ಜಾಕೆಟ್ ಗಳನ್ನು ಧರಿಸಿರುವ ಕಾರ್ಯಕರ್ತರು ಕಾರ್ ಗಳ ಕಿಟಕಿಗಾಜನ್ನು ಒಡೆದಿದ್ದಾರೆ, ಅಂಗಡಿಗಳನ್ನು ಲೂಟಿ ಮಾಡುತ್ತಿದ್ದಾರೆ. ಈ ಕುರಿತಂತೆ ಫ್ರೆಂಚ್ ಅಧ್ಯಕ್ಷ  ಎಮ್ಯಾನುಯೆಲ್ ಮ್ಯಾಕರೂನ್ ಭಾನುವಾರ ಫ್ರೆಂಚ್ ಪ್ರಧಾನಿ, ಆಂತರಿಕ ಸಚಿವರೊಂದಿಗೆ ಭದ್ರತಾ ಸಂಬಂಧ ವಿಶೇಷ ತುರ್ತು ಸಭೆ ಆಯೋಜಿಸಿದ್ದಾರೆ. 

ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ತೀಕ್ಷ್ಣ ಕಾನೂನು ಕ್ರಮ ಜರುಗಿಸಲಾಗುವುದೆಂದು ಅವರು ವಾಗ್ದಾನ ನೀಡಿದ್ದಾರೆ

loading...