ಭಾರತೀಯ ಸಂಸ್ಕøತಿ ಉತ್ಸವ-5ರ ಪೂರ್ವ ಭಾವಿ ಸಭೆ

0
7
dav
loading...

ರಬಕವಿ-ಬನಹಟ್ಟಿ: ಇಂದು ಸಮಾಜದಲ್ಲಿ ಒಗ್ಗಟ್ಟು ಒಡೆಯುವ ಕೆಲಸ ನಡೆಯುತ್ತಿದೆ. ಇದರಿಂದ ದೂರ ಉಳಿದು ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಬದುಕಬೇಕೆಂದು ಎಂದು ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಹೇಳಿದರು.
ಅವರು ಗುರುವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಭಾರತ ವಿಕಾಸ ಸಂಗಮ, ವಿಜಯಪುರ ಸಿದ್ದೇಶ್ವರ ಸಂಸ್ಥೆ ಹಾಗೂ ಬಾಗಲಕೋಟೆ ಬಸವೇಶ್ವರ ವೀರಶೈವ ವಿದ್ಯಾವಧೃಕ ಸಂಘದ ಸಹಯೋಗದಲ್ಲಿ ವಿಜಯಪುರ ಜಿಲ್ಲೆಯ ಕಗ್ಗೋಡ ಗ್ರಾಮದಲ್ಲಿ ಡಿ.24 ರಿಂದ ಡಿ.31 ರವರೆಗೆ ನಡೆಯುವ ಭಾರತೀಯ ಸಂಸ್ಕøತಿ ಉತ್ಸವ-5ರ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.

ಒಬ್ಬರಿಗೊಬ್ಬರು ಪರಸ್ಪರ ಸಹಾಯ ಸಹಕಾರ ನೀಡುವುದೇ ಪರಿವಾರ. ಅನ್ನ ಹಾಕುವ ರೈತ ತಲೆ ಎತ್ತಿ ಬದುಕದಿದ್ದರೆ ದೇಶ ನಾಶವಾಗುತ್ತದೆ. ಅನ್ನ ಹಾಕುವ ರೈತ ದೇವರ ಸಮಾನ. ಮಾನವೀಯ ಸಂಬಂದಗಳೇ ಬೇರೆ, ನಾಟಕೀಯ ಬದುಕೇ ಬೇರೆ. ದುಡಿಯುವ ಸಂಸ್ಕøತಿಯನ್ನು ಮರೆತರೆ ಹೊಸ ಗುಲಾಮಗಿರಿಗರ ಗುರಿಯಾಗುತ್ತೇವೆ. ಬದುಕು ಸೋಚನೀಯ ಸ್ಥಿತಿಯಲ್ಲಿದೆ. ಭಾರತೀಯ ಸಂಸ್ಕøತಿ ಹಾಳಾದರೆ ದೇಶಕ್ಕೆ ಉಳಿಗಾಲವಿಲ್ಲ. ನಮ್ಮ ಸಂಸ್ಕøತಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ದೇಶದ ಪ್ರತಿ ಗ್ರಾಮಗಳು ಶೃದ್ಧಾ ಕೇಂದ್ರವಾಗಿ ಪರಿವರ್ತನೆಯಾಗಬೇಕಾದರೆ ಮನೆ ಮನೆಗೆ ದೇವರ ಗುಡಿಗಳಾಗಬೇಕು. ಆಗ ಪ್ರತಿ ಹಳ್ಳಿಗಳು ಸ್ವರ್ಗವಾಗುತ್ತವೆ. ಹಳ್ಳಿಗಳ ಅಭಿವೃದ್ಧಿಯೇ ಭಾರತದ ಅಭಿವೃದ್ಧಿ. ನನ್ನ ಹಳ್ಳಿಯೇ ನನ್ನ ದೇಶ, ನನ್ನ ಜಗತ್ತು ಎಲ್ಲವೂ ನಮ್ಮಲ್ಲಿಯೇ ದೊರೆಯುವಂತಾಗಬೇಕು. ಅಂತಹ ಸಂಸ್ಕøತಿಯ ಅನಾವರಣವೇ ಈ ಭಾರತೀಯ ಸಂಸ್ಕøತಿ ಉತ್ಸವ ಕಾರ್ಯಕ್ರಮ 8 ದಿನಗಳ ಕಾಳ ನಡೆಯುವ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ತಪ್ಪದೇ ಭಾಗವಹಿಸಿ ಎಂದರು.
ಬಾಗಲಕೋಟೆ ಶಾಸಕ ವೀರಣ್ಣ ಚಿರಂತಿಮಠ, ಭಾರತೀಯ ಸಂಸ್ಕøತಿ ಉತ್ಸವದ ಬಾಗಲಕೋಟೆ ಉಸ್ತವಾರಿ ಪ್ರಮೋದ ಕುಲಕರ್ಣಿ ಮಾತನಾಡಿದರು. ಸಮಾರಂಭದಲ್ಲಿ ಮಾಜಿ ಎಂಎಲ್‍ಸಿ ನಾರಾಯಣಸಾ ಬಾಂಡಗೆ, ಎಂ. ಎಸ್. ರುದ್ರಗೌಡ, ಚಂದ್ರೇಶಖರ ಗೊಂಬಿ, ವೀರಭದ್ರಶಾಸ್ತ್ರೀ ಹಿರೇಮಠ, ಸುರೇಶ ಅಕ್ಕಿವಾಟ, ಆನಂದ ಕಂಪು, ಪ್ರಭು ಬಾಗಿ, ಶ್ರೀಶೈಲ ಬೀಳಗಿ, ಭೀಮಸಿ ಮಗದುಮ್, ಬಸಯ್ಯ ಹಿರೇಮಠ, ಪ್ರಭಾಕರ ಮೊಳೇದ, ರಾಜು ಬಾಣಕಾರ, ರವಿ ಕರಲಟ್ಟಿ, ಪುಂಡಲಿಕ ಪಾಲಬಾಂವಿ, ಡಿ. ಆರ್. ಪಾಟೀಲ, ಧರೆಪ್ಪ ಉಳ್ಳಾಗಡ್ಡಿ, ಪರಶುರಾಮ ಬಸವ್ವಗೋಳ,  ಭಾಗವಹಿಸಿದ್ದರು.

loading...