ವಾಟಾಳ್ ನಾಗರಾಜರಿಂದ ಸುವರ್ಣ ವಿಧಾನಸೌಧ ಮುಂದೆ ಪ್ರತಿಭಟನೆ : ವಾಟಳ ಬಂಧನ್

0
1
loading...

ವಾಟಾಳ್ ನಾಗರಾಜರಿಂದ ಸುವರ್ಣ ವಿಧಾನಸೌಧ ಮುಂದೆ ಪ್ರತಿಭಟನೆ : ವಾಟಳ ಬಂಧನ್

ಕನ್ನಡಮ್ಮ ಸುದ್ದಿ-ಬೆಳಗಾವಿ: ಸುವರ್ಣಸೌಧ ಚಳಿಗಾಲ ಅಧಿವೇಶನ ಹಿನ್ನೆಲೆ.ಕನ್ನಡ ಹೋರಾಟಗಾರ ವಾಟಾಳ್ ನೇತ್ರತ್ವದಲ್ಲಿ ವಿವಿಧ ಕನ್ನಡ ಹೋರಾಟಗಾರರು ಸುವರ್ಣಸೌಧ ಮುಂದೆ ಪ್ರತಿಭಟನೆ ನಡೆಸಿದರು .

ವಾಟಳರನ್ನ ಸುವರ್ಣ ಸೌಧದ ಪ್ರವೇಶ ದ್ವಾರದ ಎದುರು ಪೊಲೀಸರು ತಡೆದರು .

ಬೆಳಗಾವಿ ಸುವರ್ಣ ಸೌಧ ಮುಂದೆ ವಾಟಾಳ ನಾಗರಾಜ್ ಮಾತನಾಡಿ
ಉತ್ತರ ಕರ್ನಾಟಕ ಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ.
ಉತ್ತರ ಕರ್ನಾಟಕ ಸಮಸ್ಯೆಗಳು ಸದನದಲ್ಲಿ ಚರ್ಚೆ ಆಗಬೇಕು ಎಂದು ಆಗ್ರಹಿಸಿದರು .

ಉತ್ತರ ಕರ್ನಾಟಕ ಅನ್ಯಾಯ ನಿವಾರಿಸಲು ಪ್ರತ್ಯೇಕ ಡಿಸಿಎಂ ನೇಮಕ ಮಾಡಿ ಉತ್ತರ ಕರ್ನಾಟಕ ಕ್ಕೆ ಪ್ರತ್ಯೇಕ ಉಪಮುಖ್ಯಮಂತ್ರಿ ನೇಮಕ ಮಾಡಬೇಕು ಎಂದರು.

ಸಿಎಂ ಸೇರಿ ಯಾವೊಬ್ಬ ಸಚಿವರು ಜನರ ಸಮಸ್ಯೆ ಗೆ ಸ್ಪಂದಿಸುತ್ತಿಲ್ಲಾ.ಇವರೇಲ್ಲರೂ ವಿಮಾನದಲ್ಲಿ ಓಡಾಡುತ್ತಿದ್ದಾರೆ.ಯಾರೊಬ್ಬರು ನೆಲದ ಮೇಲೆ ಓಡಾಡುತ್ತಿಲ್ಲಾ..
ಸಿಎಂ, ಸಚಿವರಿಗೆ ಮೇಲೆ ಹಾರಾಟ ನಡೆಸಲು ಏನ ರೋಗ ಬಂದಿದೇಯಾ ಎಂದು ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು .

ವಾಟಳ್ ನಾಗರಾಜ್ ಅವರನ್ನು ಬಂಧಿಸಿ ಬಾಗೇವಾಡಿ ಪೋಲಿಸ ಠಾಣೆಗೆ ಕರದೋಯಲಾಗಿದೆ .

loading...