ಶೌಚಾಲಯಕ್ಕಾಗಿ ಮಹಿಳೆಯರ ಪ್ರತಿಭಟನೆ

0
6
loading...

ಬಾಗಲಕೋಟ: ಶೌಚಾಲಯಗಳನ್ನು ಕಟ್ಟಿಸಿಕೊಡುವದಾಗಿ ಭರವಸೆ ಕೊಟ್ಟು ಅವುಗಳನ್ನು ಕಟ್ಟಿಸದೇ ಅಲ್ಲಿಯ ಬಯಲು ಜಾಗೆಯನ್ನು ಸ್ವಚ್ಚಮಾಡಿದ್ದರಿಂದ ಮಹಿಳೆಯರಿಗೆ ಬಹಿರ್ದೆಸೆಗೆ ಹೋಗಲು ಅಡಚಣೆ ಉಂಟಾಗಿದೆ ಎಂದು ಇಳಕಲ್‍ನಲ್ಲಿ ಪ್ರತಿಭಟನೆ ಮಾಡಿದರು.
ಮಹಿಳೆಯರು ತಮ್ಮ ಮನೆಯಲ್ಲಿ ಶೌಚಾಲಯಗಳು ಇಲ್ಲದ ಕಾರಣ ಬಯಲಿನಲ್ಲಿ ಬಹಿರ್ದೆಸೆಗೆ ಹೋಗುತ್ತಿದ್ದರು. ಅವರಿಗೆ ಸುಲಭ ಶೌಚಾಲಯಗಳನ್ನು ಕಟ್ಟಿಸಿಕೊಡುವ ಭರವಸೆಯನ್ನು ನೀಡಲಾಗಿತ್ತು, ಆದರೆ ಒಮ್ಮಿಂದೊಮ್ಮಲೆ ಅಲ್ಲಿಯ ಬಯಲು ಜಾಗೆಯನ್ನು ಸಂಪೂರ್ಣವಾಗಿ ಸ್ವಚ್ಚ ಮಾಡಿದ್ದರಿಂದ ಮಹಿಳೆಯರಿಗೆ ಹೊರಗಡೆ ಬಹಿರ್ದೆಸೆಗೆ ಹೋಗಲು ತೊಂದರೆಯಾಗಿ ಪ್ರತಿಭಟನೆಗೆ ಇಳಿದರು.

ಈ ವಾರ್ಡಿನಿಂದ ಆಯ್ಕೆಯಾದ ಕಾಂಗ್ರೆಸ್ ಸದಸ್ಯೆ ರೇಷ್ಮಾ ಮಾರಣಬಸರಿ ನನ್ನ ಕೈಯಲ್ಲಿ ಯಾವ ಅಧಿಕಾರವೂ ಇನ್ನೂ ಬಂದಿಲ್ಲ ಆದರೂ ನಗರಸಭೆ ಕಚೇರಿಗೆ ಹೋಗಿ ಅಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಚರ್ಚಿಸಿ ಸುಲಭ ಶೌಚಾಲಯ ನಿರ್ಮಿಸಲು ಮತ್ತು ಮನೆಯ ಮುಂದೆ ಶೌಚಾಲಯವನ್ನು ಕಟ್ಟಿಸಲು ನಗರಸಭೆಯ ಸಹಾಯಧನ ಕೊಡಿಸುವ ಭರವಸೆಯನ್ನು ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

loading...