ಸಚಿವರ ಕ್ಷೇತ್ರದ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳ ಕೊರತೆ:ಹೀರೆನಂದಿ ಗ್ರಾಮಸ್ಥರ ಅಳಲು

0
2
loading...

ಸಚಿವರ ಕ್ಷೇತ್ರದ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳ ಕೊರತೆ:ಹೀರೆನಂದಿ ಗ್ರಾಮಸ್ಥರ ಅಳಲು

ಕನ್ನಡಮ್ಮ ಸುದ್ದಿ-ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೋಳಿ ಅವರ ಗೋಕಾಕ ಕ್ಷೇತ್ರದ ಹೀರೆನಂದಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ,ಇದು ಚುನಾವಣಾಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಡಿಮೆ ಮತ ನೀಡಿದರ ಪರಿಣಾಮ ಎಂದು ಹೀರೆನಂದಿ ಗ್ರಾಮಸ್ಥರು ತಮ್ಮ ಅಳಲು ತೊಡಿಕೊಂಡರು .

ಇಂದು ನಗರದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಹೀರೆನಂದಿ ಗ್ರಾಮಸ್ಥರು ಗ್ರಾಮದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲ,ಕಳೆದ ಒಂದು ವರ್ಷದಿಂದ ಎನ್ ಆರ್ ಜಿ ಯೋಜನೆ ಸ್ಥಗೀತವಾಗಿ ಗ್ರಾಮ ಪಂಚಾಯತಿ ಇದ್ದು ಇಲ್ಲದಂತಾಗಿದೆ‌.ಸಚಿವ ರಮೇಶ ಜಾರಕಿಹೋಳಿ ಅವರಿಗೆ ಕಳೆದ ವಿಧಾನ ಸಭೆಗೆ ಹೀರೆನಂದಿ ಗ್ರಾಮದಿಂದ ಕಡಿಮೆ ಮತ ಬಂದಿದ್ದುರಿಂದ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದು, ಗ್ರಾಮದ ಶಾಲೆಗೆ ಶಿಕ್ಷಕರ ನೇಮಕವಿಲ್ಲ,ಬಸ್ ವ್ಯವಸ್ಥೆಯಿಲ್ಲ, ಸರಕಾರಿ ಆಸ್ಪತ್ರೆಗೆ ವೈದ್ಯರ ನೇಮಕವಿಲ್ಲ ಹಾಗೂ ಸರಕಾರ ಎಲ್ಲ ಸೌಲಭ್ಯಗಳು ಗ್ರಾಮಕ್ಕೆ ಬರುತ್ತಿಲ್ಲ ಎಂದು ತಮ್ಮ ಅಳಲು ತೊಡಿಕೊಂಡರು .

ಸಿದ್ದಪ್ಪ ಪೂಜಾರ,ಅಶೋಕ ಅಂಕಲಗಿ ಸೇರಿದಂತೆ ಇತರರು ಇದ್ದರು.

loading...