ಸಮಗ್ರ ಗ್ರಾಮ ಅಭಿವೃದ್ಧಿಗೆ ಗೊವಿಂದಕೊಪ್ಪ ಆಯ್ಕೆ

0
7
loading...

ಕನ್ನಡಮ್ಮ ಸುದ್ದಿ-ಕಲಾದಗಿ: ಸಮೀಪದ ಗೋವಿಂದಕೊಪ್ಪ ಗ್ರಾಮದಲ್ಲಿನ ಪ್ರತಿಯೊಂದು ಮನೆಗೂ, ಪ್ರತೀ ರೈತನ, ನೀರಾವರಿ ಕೃಷಿಭೂಮಿ, ಖುಷ್ಕಿ ಒಣಭೂಮಿ, ನರೇಗಾ ಯೋಜನೆಯಡಿ ಒಂದಾದರೂ ಸೌಲಭ್ಯ ಒದಗಿಸುವುದೆ ಸಮಗ್ರ ಗ್ರಾಮ ಅಭಿವೃದ್ಧಿಯ ಉದ್ದೇಶವಾಗಿದೆ ಎಂದು ಜಿಪಂ ಸಿಇಓ ಗಂಗೂಬಾಯಿ ಮಾನಕರ ಹೇಳಿದರು.
ಮಾದರಿ ಗ್ರಾಮ: ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಮಗ್ರ ಗ್ರಾಮ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮಗ್ರ ಗ್ರಾಮ ಅಭಿವೃದ್ಧಿಯಲ್ಲಿ ಗ್ರಾಮದಲ್ಲಿ ಯಾವುದೇ ಮೂಲಭೂತ ಸೌಲಭ್ಯ ಕೊರತೆ ಇರದಂತೆ ನೊಡಿಕೊಂಡು ಅಭಿವೃದ್ಧಿ ಪಡಿಸುವ ಯೋಜನೆಯಾಗಿದೆ.

ರೈತರು ಕೃಷಿ ಮಾಡಲು ಸಹಾಯ ಧನ, ಬಾಳೆ ಬೆಳೆಯಲು ಪ್ರತೀ ಹೆಕ್ಟೇರಗಿ 2,50,000 ರೂಪಾಯಿ ಸಹಾಯ ಧನ ನೀಡಲು ಅವಕಾಶವಿದೆ, ಸರಕಾರದ ಯಾರು ಸೌಲಭ್ಯದಿಂದ ವಂಚಿತರಾಗಿದ್ದಾರೆ ಅಂತಹ ರೈತರÀ ಮಾಹಿತಿ ಪಡೆದು ತಮ್ಮಿಂದ ಅವಶ್ಯಕ ದಾಖಲಾತಿ ಕೇಳಿದಾಗ ಅವುಗಳನ್ನು ಒದಗಿಸಿದರೆ ತಕ್ಷಣವೇ ಸರಕಾರದ ಸೌಲಭ್ಯವನ್ನು ಒದಗಿಸಲಾಗುವುದು, ಒಳ್ಳೆಯ ಶಾಲೆ, ಆಟದ ಮೈದಾನ, ಗ್ರಂಥಾಲಯ, ಗ್ರಾಮದಲ್ಲಿ ಶೌಚಾಲಯ, ಗರಡಿ ಮನೆ, ವಿಶ್ರಾಂತಿ ಕಟ್ಟೆ, ಮಾದರಿ ರುದ್ರಭೂಮಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಸ್ಮಾರ್ಟ ಕ್ಲಾಸ್, ಸೋಲಾರ್ ಬೀದಿ ದೀಪ, ಗ್ರಾಮ ಸ್ವಾಗತ ಕಮಾನ ಇವೆಲ್ಲವುಗಳನ್ನು ಮಾಡುವ ತಯಾರಿ ಯೋಜನೆ ಹಾಕಿಕೊಂಡು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವುದೇ ಸಮಗ್ರ ಗ್ರಾಮ ಅಭಿವೃದ್ಧಿ ಎಂದು ಹೇಳಿದರು.
ಈ ವೇಳೆ ತಾಪಂ ಇಓ ಎನ.ವಾಯ್.ಬಸರಿಗಿಡದ, ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಮಲ್ಲಪ್ಪ ಮೇಟಿ, ಕೃಷಿ ಸಹಾಯಕ ನಿರ್ದೇಶಕ ಪಾಂಡಪ್ಪ ಲಮಾಣಿ, ತಾಲೂಕ ರೇಷ್ಮೇ ವಿಸ್ತೀರ್ಣಾಧಿಕಾರಿ ಬಸವರಾಜ ನಡುವಿಮನಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಚಂದ್ರಶೇಖರ ರಕ್ಕಸಗಿ, ತಾಲೂಕಾ ಪಶುವೈಧ್ಯಾಧಿಕಾರಿ ಬಸುವರಾಜ ಪದರ, ನರೇಗಾ ತಾಂತ್ರಿಕ ಸಮಯೋಜಕ ರಾಚಣ್ಣ ಅಂಗಡಿ, ನರೇಗಾ ಸಹಾಯಕ ತಾಂತ್ರಿಕ ಪ್ರಕಾಶ ಸತಾನಿ, ಕಲಾದಗಿ ಪಿಡಿಓ ಸಿ.ಎಚ್.ಪವಾರ, ಚಿಕ್ಕಶೇಲ್ಲಿಕೇರಿ ಗ್ರಾಪಂ ಪಿಡಿಓ ಪರಮೇಶ್ವರ ಚೆಲವಾದಿ, ಆರೋಗ್ಯಾಧೀಕಾರಿ ಬಸವರಾಜ ಕರಿಗೌಡರ, ತಾಪಂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಬಸುರಾಜ ಪರಗಿ ಇದ್ದರು.

loading...