ಸ್ಮಶಾನದಲ್ಲಿ ಮದುವೆ ಇದು ಹೊಸ ಮೈಲುಗಲ್ಲು ಮೌಡ್ಯ ವಿರೋಧಿ ಕಾರ್ಯಕ್ರಮದಲ್ಲಿ ಸತೀಶ ಜಾರಕಿಹೋಳಿ ಸಂತಸ

0
112
loading...

ಸ್ಮಶಾನದಲ್ಲಿ ಮದುವೆ ಇದು ಹೊಸ ಮೈಲುಗಲ್ಲು
ಮೌಡ್ಯ ವಿರೋಧಿ ಕಾರ್ಯಕ್ರಮದಲ್ಲಿ ಸತೀಶ ಜಾರಕಿಹೋಳಿ ಸಂತಸ

ಕನ್ನಡಮ್ಮ ಸುದ್ದಿ-ಬೆಳಗಾವಿ:ದೊಡ್ಡ ದೊಡ್ಡ ಪುರೋಹಿತರು ಬಂದು ಮಾಡಿದ ಮದುವೆಗಳು ಮುರಿದಿವೆ ,ಸರಳ ಮದುವೆಗಳು ನಡೆಯಬೇಕು ,ಸ್ಮಶಾನದಲ್ಲಿ ಅಂತರಜಾತಿ ವಿವಾಹ ಹೊಸ ಮೈಲುಗಲು ,ಇದು ಈ ಬಾರಿ ಮಾನವ ಬಂಧುತ್ವ ವೇದಿಕೆ ಹೋರಾಟದ ಫಲ
ಎಂದು ಸತೀಶ ಜಾರಕಿಹೋಳಿ ಹೇಳಿದರು.

ಗುರುವಾರ ನಗರದ ಸದಾಶಿವ ನಗರದ ಸ್ಮಶಾನದಲ್ಲಿ ಅಂಬೇಡ್ಕರ್ ಪರಿನಿರ್ವಾಹಣ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಮೌಡ್ಯ ವಿರೋಧಿ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು .

ಮೌಡ್ಯದ ಬಗ್ಗೆ ಜನರಲ್ಲಿ ಜಾಗೃತಿ ಅವಶ್ಯವಿದೆ ,ಅಂಬೇಡ್ಕರ್ ಬರೆದ ಸಂವಿಧಾನ ಉಳಿಯಬೇಕು ಅದನ್ನು ಬದಲಾಯಿಸದಂತೆ ಹೋರಾಟ ನಡೆಯಬೇಕು,ಸಂವಿಧಾನದ ಆಶಯ ಉಳಿಯಬೇಕು ಎಂದು ಕರೆ ನೀಡಿದರು .

ಚುನಾವಣಾಯಲ್ಲಿ ಬಹಳ ಕಡಿಮೆ ಖರ್ಚು ಮಾಡಿ ಗೆದ್ದಿದು ಬಹಳ ಹೆಮ್ಮೆಯಿದೆ,ಇದಕ್ಕೆ ಮಹಾನ ನಾಯಕರ ಆದರ್ಶವೆ ನನ್ನ ಗೆಲುವು ಸಹಕಾರಿ,ಸರಾಯಿ ಹಂಚದೆ ಶಾಸಕನಾಗಿದ್ದು ಸಂತೋಷವಿದೆ ಎಂದು ಚುನಾವಣಾಯಲ್ಲಿ ಕಡಿಮೆ ಮತಗಳ ಬಂದಿದರ ಬಗ್ಗೆ ತಿಳಿಸಿದರು .

ಮುಂದಿನ ಬಾರಿಯು ರಾಹು ಕಾಲದಲ್ಲಿ ಚುನಾವಣೆ ನಾಮ ಪತ್ರ ಸಲ್ಲಿಸುತ್ತೆನೆ,ಭಾರತ ದೇಶದಲ್ಲಿಯೇ ಪ್ರಚಾರಕ್ಕೆ ಹೋಗದ ಗೆದ್ದಿದು ದಾಖಲೆಯಾಗಿದೆ,ಸ್ಮಶಾನದಲ್ಲಿ ಮೌಡ್ಯದ ಬಗ್ಗೆ ಅರಿಯು ಮೂಡಿಸುವ ಕಾರ್ಯಕ್ರಮ ವಿಶೇಷವಾಗಿದೆ ಎಂದರು .

ಚಿಕ್ಕ ಮಕ್ಕಳಲ್ಲಿ ಅಂಬೇಡ್ಕರ್ ಬಗ್ಗೆ ಅವರು ಬರೆದ ಸಂವಿಧಾನ ಬಗ್ಗೆ ತಿಳಿಸಬೇಕೇಕಿದೆ,ಮಹಾನ ವ್ಯಕ್ತಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು,ಹಿಂದುತ್ವಕ್ಕರ ಸೀಮಿತ ಮಾಡುತ್ತಿರುವ ಛತ್ರಪತಿ ಶಿವಾಜಿಯನ್ನು ರಕ್ಷಿಸಿಸಿದ್ದು ಮುಸ್ಲಿಂರು ಇದನ್ನು ನಾವು ತಿಳಿದುಕೊಳ್ಳಬೇಕಿದೆ,ಇತಿಹಾಸ ಬಗ್ಗೆ ತಿಳಿಸಬೇಕಿದೆ ಟಿಪ್ಪು ಸುಲ್ತಾನ್ ಬಗ್ಗೆ ತಪ್ಪು ಸಂದೇಶ ರವಾಣಿಯಾಗುತ್ತಿದೆ ಇಂದಿನ ಪೀಳಿಗೆ ಇದರ ಬಗ್ಗೆ ತಿಳಿಯಬೇಕು ಎಂದರು.

ಮಾನವ ಬಂದುತ್ವ ವೇದಿಕೆ ಕೆಲಸಗಳು ಇನ್ನು ಹಳ್ಳಿ ಹಳ್ಳಿಗೆ ಮುಟ್ಟಬೇಕು,ಸಮಾಜದಲ್ಲಿ ಬೇರೂರಿದ ಗೊಡ್ಡು ಸಂಪ್ರದಾಯ ತೋಲಗಬೇಕಿದೆ ,ಬುದ್ದ ಬಸವ ಮತ್ತು ಅಂಬೇಡ್ಕರ್ ಅವರ ತತ್ವ ಆದರ್ಶ ಪಾಲಿಸಬೇಕಾಗಿದೆ.

ಸ್ಮಶಾನದಲ್ಲಿ ಮೌಡ್ಯ ವಿರೋಧಿ ಕಾರ್ಯಕ್ರಮದಿಂದ ಕಳೆದ ಐದು ವರ್ಷದಿಂದ ಎಲ್ಲರಲ್ಲಿಯೂ ಯಶಸ್ವಿ ಕಂಡಿದೆವೆ ,ಸಮಾಜವನ್ನು ಪರಿವರ್ತನೆ ಮಾಡುವ ಕಾರ್ಯ ನಡೆಯಬೇಕು,ಮಾನವ ಬಂಧುತ್ವ ವೇದಿಕೆ ಇದಕ್ಕೆ ಮುಂದಾಗಬೇಕು ,

ನಮ್ಮ ಹೋರಾಟ ಜಾತಿ ಧರ್ಮ ದ ಹೆಸರಿನಲ್ಲಿ ಕೆಟ್ಟ ಸಂಪ್ರದಾಯ ನಡೆಯುತ್ತವೆ ,ಇದರ ವಿರುದ್ಧ ನಮ್ಮ ಹೋರಾಟ ,ಸ್ಮಶಾನದಲ್ಲಿ ಮದುವೆ ಮಾಡಿಕೊಳ್ಳುವರಿಗೆ ೨ ಲಕ್ಷ ರೂ ನೀಡ ಬೇಕು ಎಂದರು .ಸಮಾರಂಭದಲ್ಲಿ ನಿವೃತ್ತಿ ನ್ಯಾಯಮೂರ್ತಿ ನಾಗಮೋಹನ ದಾಸ,ಸಾಹಿತ್ಯಿ ಬರಗೂರ ರಾಮಚಂದ್ರನ್ ಸೇರಿದಂತೆ ಇತರರು ಇದ್ದರು.

loading...