34 ವರ್ಷದ ಹಿಂದಿನ ಪ್ರಕರಣ ಆರೋಪಿ ಬಂಧನ

0
25
loading...

34 ವರ್ಷದ ಹಿಂದಿನ ಪ್ರಕರಣ ಆರೋಪಿ ಬಂಧನ

ಕನ್ನಡಮ್ಮ ಸುದ್ದಿ-ಬೆಳಗಾವಿ:ಚನ್ನಮ್ಮನ ಕಿತ್ತೂರು: ಅಕ್ರಮವಾಗಿ ಶ್ರೀಗಂದ
ಕಟ್ಟಿಗೆಯನ್ನು ಸಾಗಿಸುತ್ತಿದ್ದಾಗ ಪರಾರಿಯಾದ
ಆರೋಪಿಯನ್ನು 34 ವರ್ಷಗಳ ನಂತರ
ಆರೋಪಿಯನ್ನು ಬಂಧಿಸುವಲ್ಲಿ ಕಿತ್ತೂರು ಪೋಲಿಸರು
ಯಶಸ್ವಿಯಾಗಿದ್ದಾರೆ.

1984ರಲ್ಲಿ ಪರಾರಿಯಾದ ಆರೋಪಿಯ ಮೇಲೆ ಬೈಲಹೊಂಗಲ
ನ್ಯಾಯಾಲಯದಲ್ಲಿ ವಾರೆಂಟ್ ಜಾರಿಯಾಗಿತ್ತು. ಈ ಹಿನ್ನೆಲೆ
ಆರೋಪಿಯನ್ನು ಬಂಧಿಸಲು ಶೋಧ ಕಾರ್ಯ
ಮುಂದುವರೆದಿತ್ತು ಆದರೆ 34 ವರ್ಷಗಳ ನಂತರ
ಆರೋಪಿ ಚಂದ್ರಕಾಂತ ಲಕ್ಷ್ಮಣ ಸೂರ್ಯವಂಶಿ (61)
ಮಹಾರಾಷ್ಟ್ರದ ಸಾಂಗಲಿ ಪಟ್ಟಣದಲ್ಲಿರುವ ಕುರಿತು ಖಚಿತ
ಮಾಹಿತಿ ಮೇರೆಗೆ ಕಿತ್ತೂರು ಪೋಲಿಸರು ಸಾಂಗಲಿ ಪಟ್ಟಣದ
ನವ ವಸಂತ ಬಾಲಾಜಿ ಮಿಲ್ ಹತ್ತಿರ ಬುಧವಾರ ಬಂಧಿಸುವಲ್ಲಿ
ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ
ಹಾಜರು ಪಡಿಸಿದ್ದಾರೆ. ನ್ಯಾಯಾಲಯವು
ಆರೋಪಿಯನ್ನು ಬೆಳಗಾವಿ ಕೇಂದ್ರ ಕಾರಾಗೃಹದ
ನ್ಯಾಯಾಂಗ ಬಂಧನದಲ್ಲಿ ಇರಿಸಿದೆ.
ಬೆಳಗಾವಿ ಎಸ್.ಪಿ ಸುಧೀರಕುಮಾರ ರೆಡ್ಡಿ, ಡಿವೈ ಎಸ್ ಪಿ
ಕರುಣಾಕರ ಶೆಟ್ಟಿ, ಸಿಪಿಐ ರಾಘವೇಂದ್ರ ಹವಾಲ್ದಾರ
ಮಾರ್ಗದರ್ಶನದಲ್ಲಿ ಪಿ.ಎಸ್.ಐ ವೀರಣ್ಣ ಲಟ್ಟಿ ಇವರ
ನೇತೃತ್ವದಲ್ಲಿ ಮುಖ್ಯ ಪೇದೆ ಕೆ.ಎಫ್.ಸನದಿ, ಪೇದೆ
ಜೆ.ಆರ್.ಗಿಡಪ್ಪನವರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಹಿನ್ನಲೆ 30/07/1984ರಲ್ಲಿ ಅಕ್ರಮವಾಗಿ 900 ಕೆ.ಜಿ ತೂಕದ
ಶ್ರೀಗಂಧದ ಕಟ್ಟಿಗೆ ತುಂಡುಗಳನ್ನು ಆಗಿನ ಅಂದಾಜು
ರೂ. 54 ಸಾವಿರ ಮೌಲ್ಯದ. ಎಟಿಎಂ. 9947 ನಂಬರಿನ ಗೂಡ್ಸ್
ಟೆಂಪೋ ವಾಹನದಲ್ಲಿ ಧಾರವಾಡದಿಂದ ಮಹಾರಾಷ್ಟ್ರದ
ಮಿರಜ್ ಕಡೆಗೆ ತೆಗೆದುಕೊಂದು ಹೋಗುತ್ತಿದ್ದಾಗ ದಾರಿ
ಮದ್ಯದ ಕಿತ್ತೂರಿನ ಸೌದಾಗರ ಪೆಂಟ್ರೋಲ್ ಪಂಪ
ಹತ್ತಿರ ಖಚಿತ ಮಾಹಿತಿ ಮೇರೆಗೆ ಅಂದಿನ ಪಿ.ಎಸ.ಐ ಕರನಿಂಗ,
ಅರಣ್ಯ ಇಲಾಖೆ ಅಧಿಕಾರಿ ಎ.ಎ.ಹವಾಲ್ದಾರ ಸಿಬ್ಬಂದಿಯೊಂದಿಗೆ ದಾಳಿ
ನಡೆಸಿ ವಾಹನ ಮತ್ತು ಶ್ರೀಗಂಧದ ತುಂಡುಗಳನ್ನು
ವಶಪಡಿಸಿಕೊಂಡಿದ್ದರು. ವಾಹನವನ್ನು ಆರೋಪಿ
ಚಂದ್ರಕಾಂತ ಲಕ್ಷ್ಮಣ ಸೂರ್ಯವಂಶಿ (37) ಬಿಟ್ಟು
ಪರಾರಿಯಾಗಿದ್ದ. ನಂತರ ಈತನ ಮೇಲೆ ಅರಣ್ಯ
ಕಾಯ್ದೆಯಡಿ ತಲೆಮರಸಿಕೊಂಡ ಆರೋಪಿತನಾಗಿದ್ದ ಈ
ಪ್ರಕರಣವನ್ನು ಬೇಧಿಸಿ ಆರೋಪಿಯನ್ನು ಬಂಧಿಸಲು ಆಗಿನ
ಬೈಲಹೊಂಗಲ ಸಿ.ಪಿ.ಐ ಎನ್. ಈಶ್ವರಯ್ಯ ಅವರು ತನಿಖಾ
ಅಧಿಕಾರಿಯಾಗಿ ತನಿಖೆ ಕೈಗೊಂಡಿದ್ದಾದರೂ
ಆರೋಪಿಯನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ .

loading...