ಅಲೋಕ್ ವರ್ಮಾ ನೇಮಕ, ಪದಚ್ಯುತಿಗೂ ಖರ್ಗೆ ಅಸಮ್ಮತಿ– ಕೇಂದ್ರ ಸಚಿವರು

0
0
loading...

ನವದೆಹಲಿ:- ಸಿಬಿಐ ನಿರ್ದೇಶಕರಾಗಿ ಅಲೋಕ್ ವರ್ಮಾ ಅವರನ್ನು ತೆಗೆದು ಹಾಕಲು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮ್ಮತಿ ವ್ಯಕ್ತಪಡಿಸುತ್ತಲೇ ಇದ್ದರು ಎಂದು ಕೇಂದ್ರ ಸಚಿವರು ಮತ್ತು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಸಿಬಿಐ ಮುಖ್ಯಸ್ಥ ಸ್ಥಾನಕ್ಕೆ ಅಲೋಕ್ ವರ್ಮಾ ನೇಮಕಕ್ಕೆ ಖರ್ಗೆ ಸಮ್ಮತಿಸಿರಲಿಲ್ಲ. ಅದೇ ಆಯ್ಕೆ ಸಮಿತಿ ಈಗ ಅವರನ್ನು ಆ ಸ್ಥಾನದಿಂದ ಕಿತ್ತು ಹಾಕುವಾಗಲೂ ಖರ್ಗೆ ಸಮ್ಮತಿಸಿಲ್ಲ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವ ಬಾಬುಲ್ ಸುಪ್ರಿಯೋ ಸಹ ಖರ್ಗೆ ಅವರು ಅಲೋಕ ವರ್ಮಾ ನೇಮಕಕ್ಕೂ, ಅವರನ್ನು ತೆಗೆದು ಹಾಕಲು ಎರಡಕ್ಕೂ ಅಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂಟು ಟೀಕಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಭಾರತದ ಮುಖ್ಯನ್ಯಾಯಮೂರ್ತಿ ಜೆ.ಎಸ್.ಖೇಹರ್ ಸಿಬಿಐ ಮುಖ್ಯಸ್ಥರಾಗಿ ಅಲೋಕ್ ವರ್ಮಾ ಅವರನ್ನು ನೇಮಿಸಿದ್ದರು. ಆಗ ಕೂಡ ಮಲ್ಲಿಕಾರ್ಜುನ ಖರ್ಗೆ ತಮ್ಮ ಅಸಮ್ಮತಿ ಸೂಚಿಸಿದ್ದರು.
ತನಿಖಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ಅನುಭವ ಅಲೋಕ್ ವರ್ಮಾ ಅವರಿಗೆ ಇಲ್ಲವಾದ್ದರಿಂದ ನೇಮಕ ಮರುಪರಿಶೀಲಿಸುವಂತೆ 2017ರ ಜನವರಿ 20 ರಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದನ್ನು ಬಿಜೆಪಿ ನಾಯಕರು ಉಲ್ಲೇಖಿಸಿದ್ದಾರೆ.

loading...