ಆಂಗ್ಲ ಮಾಧ್ಯಮ ಶಾಲೆ ಆರಂಭಕ್ಕೆ ಸಂಪುಟ ಹಸಿರು ನಿಶಾನೆ ತೋರಲಿದೆಯೇ?

0
0
loading...

ಬೆಂಗಳೂರು,ಜ. 10(ಯುಎನ್ ಐ) ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ ಸಭೆ ನಡೆಯಲಿದ್ದು ಎಲ್ಲರ ಕಣ್ಣುಮುಂದಿನ ಶೈಕ್ಷಣಿಕ ವರ್ಷದಿಂದ ಸಾವಿರ ಆಂಗ್ಲ ಮಾಧ್ಯಮ ಶಾಲೆ ಆರಂಭಕ್ಕೆ ಸರ್ಕಾರ ತೀರ್ಮಾನ ಮಾಡಲಿದೆಯೇ ಎಂಬುದರ ಮೇಲೆ ಗಮನ ಹರಿಸಿದೆ.
ಮೊನ್ನೆ ತಾನೆ ಧಾರವಾಡದಲ್ಲಿ ಮುಗಿದ ಅಖಿಲ ಭಾರತ 84ನೇ ಸಾಹಿತ್ಯ ಸಮ್ಮೇಳನ ಸರ್ಕಾರದ ಕ್ರವವನ್ನು ಬಲವಾಗಿ ವಿರೋಧಿಸಿತ್ತು ಅಲ್ಲದೆ ಇದನ್ನು ಜಾರಿಗೊಳಿಸದಂತೆ ಸರ್ವಾನುಮತದ ನಿರ್ಣಯವನ್ನೂ ತೆಗೆದುಕೊಂಡಿತ್ತು.
ವಿಧಾನಮಂಡಲದ ಜಂಟಿ‌ ಅಧಿವೇಶನ, ಬಜೆಟ್ ಮಂಡನೆ ದಿನಾಂಕ‌ ನಿಗದಿ,ಖಾಸಗಿ ಉದ್ಯೋಗ ಏಜೆನ್ಸಿಗಳ ನಿರ್ಬಂಧಕ್ಕೆ ಕಾಯ್ದೆ ಜಾರಿ, ಕರ್ನಾಟಕ ಸಿವಿಲ್ ಸೇವೆಗಳ ನಿಯಾಮವಳಿಗೆ ತಿದ್ದುಪಡಿ ಸೇರಿದಂತೆ ಮಹತ್ವದ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಲಿದೆ ಎಂದು ಹೇಳಲಾಗಿದೆ.

ಕರ್ನಾಟಕ ಲೊಕಾಯುಕ್ತ ಸಂಸ್ಥೆಯ ೧೫-೧೬ ಹಾಗೂ ೧೬ -೧೭ ನೆ ಸಾಲಿನ ವಾರ್ಷಿಕ ಸಂಚಿತ ವರದಿಗಳು ಉಭಯ ಸದನ ಗಳಲ್ಲಿ ಮಂಡಿಸುವ ಬಗ್ಗೆ,ಕರ್ನಾಟಕ ನಾಗರಿಕ ಸೇವಾ(ಕಾರ್ಯ ನಿರ್ವಹಣ ವರದಿಗಳ ತಿದ್ದುಪಡಿ) ನಿಯಮಗಳು ೨೦೧೮ ಕ್ಕೆ ಅನುಮೋದನೆ ನೀಡುವುದು,ಕರ್ನಾಟಕ ಸಿವಿಲ್ ಸೇವೆಗಳು ನೇಮಕಾತಿ ವಿಧೇಯಕ ೨೦೧೮ ಕ್ಕೆ ಘಟನೋತ್ತರ ಅನುಮೊದನೆ ನೀಡುವ ಬಗ್ಗೆ,ಕರ್ನಾಟಕ ಖಾಸಗಿ ಉದ್ಯೋಗ ಎಜನ್ಸಿ ನಿರ್ಬಂಧನೆಗಳು ವಿಧೇಯಕ ೨೦೧೮ ಕ್ಕೆ ಅನುಮೊದನೆ ನೀಡುವ ಬಗ್ಗೆ,ಬಳ್ಳಾರಿ ನಗರದಲ್ಲಿ ಕಂದಾಯ ಇಲಾಖೆ ಕಚೇರಿ ನಿರ್ಮಾಣಕ್ಕಾಗಿ ೨ ಎಕರೆ ಜಮೀನನ್ನು ಮಾರುಕಟ್ಟೆ ದರಕ್ಕೆ ಮಂಜೂರು, ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ವಿಧೇಯಕ ೨೦೧೮ಕ್ಕೆ ಅನುಮೊದನೆ ನೀಡುವುದು, ೬೪೮-೩೮ ಎಕರೆ ಅರಣ್ಯ ಮಿಸಲು ಜಮೀನನ್ನು ಕುವೆಂಪು ವಿಶ್ವ ವಿದ್ಯಾಲಯಕ್ಕೆ ನೀಡುವ ಬಗ್ಗೆ, ಖಾಸಗಿ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ೬೦ ನಾಡ ಕಚೇರಿಗಳಿಗೆ ಸರ್ಕಾರಿ ಕಟ್ಟಡ ನಿರ್ಮಿಸುವ ಬಗ್, ವಿಜಯಪುರ ಜಿಲ್ಲೆಯ ೨೩ ಗ್ರಾಮಗಳಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ೭೩.೬೨ ಕೋಟಿ ರೂಗೆ ಅನುಮೋದನೆ, ಕರ್ನಾಟಕ ಸಾಮಾನ್ಯ ಸೇವೆ (ವೃಂದ ಮತ್ತು ನೇಮಕಾತಿ) ತಿದ್ದುಪಡಿ ನಿಯಮಗಳು ೨೦೧೯ಕ್ಕೆ ಅನುಮೊದನೆ ‌ನೀಡುವ ಬಗ್ಗೆ, ಬೆಟ್ಟ ಕುರುಬ ಜಾತಿಯನ್ನು ಕರ್ನಾಟಕ ರಾಜ್ಯದ ಪರಿಶಿಷ್ಟ ಪಂಗಡದ ಕ್ರ.ಸಂ. ೧೬ ರಲ್ಲಿ ‘ಕಾಡು ಕುರುಬ’ ಜಾತಿಗೆ ಸಮಾನಂತರವಾಗಿ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಬಗ್ಗೆ,ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿಯಮಗಳು ೨೦೧೮ ಕ್ಕೆ ಅನುಮೊದನೆ ನೀಡುವ ಬಗ್ಗೆ, ಕಲಬುರಗಿ ನಗರಾಭಿವೃದ್ಧಿ ಇಲಾಖೆಯಿಂದ ೮೮.೩೧ ಎಕರೆ ಜಮೀನಿನಲ್ಲಿ ೯೪.೮೦ ಕೋಟಿ ರೂ ವೆಚ್ಚದಲ್ಲಿ ವಸತಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ಬಗ್ಗೆ.
ಆಲಮಟ್ಟಿ ಜಲಾಶಯದ ಪುನಶ್ಚೇತನ ಮತ್ತು ಅಭಿವೃದ್ದಿಗಾಗಿ ಹೆಚ್ಚುವರಿ ೭೬೬.೯೬ ಲಕ್ಷ ರೂಪಾಯಿ ನೀಡುವುದರ ಬಗ್ಗೆ,೧೮-೧೯ ನೇ ಸಾಲಿನ ಐಸಿಡಿಎಸ್ ಯೋಜನೆ ಅಡಿ ಅಂಗನವಾಡಿ ಕೇಂದ್ರಗಳಿಗೆ ೯.೬೩ ಕೊ ವೆಚ್ಚದಲ್ಲಿ ಔಷಧಿ ಕಿಟ್ ಖರೀದಿಲು ಅನುಮೊದನೆ ನೀಡುವುದರ ಬಗ್ಗೆ, 18-19 ನೇ ಸಾಲಿನ ಐಸಿಡಿಎಸ್ ಯೋಜನೆ ಅಡಿ ಅಂಗನವಾಡಿ ಕೇಂದ್ರಗಳಿಗೆ ಕೊ ೧೯.೭೭ ಕೊ.ವೆಚ್ಚದಲ್ಲಿ ಶಾಲಾ ಪೂರ್ವ ಕಿಟ್ ಖರೀದಿಸಲು ಅನುಮೊದನೆ ನೀಡಲಿದೆ ಎಂದು ಹೇಳಲಾಗಿದೆ.

loading...