ಆರೋಗ್ಯವಂತರಾಗಲು ವಾಯುವಿಹಾರ ಅಗತ್ಯ: ಶಾಸಕಿ ಅಂಜಲಿ ನಿಂಬಾಳಕರ

0
0
loading...

ಆರೋಗ್ಯವಂತರಾಗಲು ವಾಯುವಿಹಾರ ಅಗತ್ಯ: ಶಾಸಕಿ ಅಂಜಲಿ ನಿಂಬಾಳಕರ

ಕನ್ನಡಮ್ಮ ಸುದ್ದಿ-ಹಲಸಿ: ಮಹಿಳೆಯರು ಮನೆಯ ಹೊಸ್ತಿಲ ಒಳಗೆನೇ ಇರದೆ ಮುಂಜಾನೆ-ಸಂಜೆ ಸಮಯದಲ್ಲಿ ವಾಯು ವಿಹಾರ ಅಭ್ಯಾಸ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಶುದ್ಧ ಗಾಳಿ ಸೇವನೆಯಿಂದ ರೋಗ ಮುಕ್ತರಾಗಲು ಹಾಗೂ ಆರೋಗ್ಯವಂತರಾಗಿ ಬದುಕಲು ಸಂಕಲ್ಪ ಮಾಡಬೇಕು. ಪುರುಷರು ಶುದ್ಧ ವಾತಾವರಣದಲ್ಲಿ ಅಡ್ಡಾಡುವುದರಿಂದ ಮಧುಮೇಹ,ರಕ್ತದೊತ್ತಡದಂತ ಮಾರಕ ಕಾಯಿಲೆಯಿಂದ ದೂರವಾಗಬಹುದು.ಆದ್ದರಿಂದ ಹಲಸಿ ಗ್ರಾಮದ ವ್ಯಾಸತೀರ್ಥ ಉದ್ಯಾನ ವನದ ಉದ್ದೇಶ ನಾಗರಿಕರ ಆರೋಗ್ಯ ಕಾಪಾಡುವುದಾಗಿದೆ.ಆದ್ದರಿಂದ ನಿಸರ್ಗ ಮಧ್ಯದ ಈ ಉದ್ಯಾನದ ಸದುಪಯೊಗ ಪಡೆದುಕೊಳ್ಳಬೇಕು ಎಂದು ಗ್ರಾಮದ ಜನರಿಗೆ ಖಾನಾಪುರ ತಾಲೂಕಿನ ಶಾಸಕಿ ಡಾ.ಅಂಜಲಿ ಹೇಮಂತ ನಿಂಬಾಳಕರ ಸಲಹೆ ನೀಡಿದರು.

ಗ್ರಾ.ಪಂ.ಕಾರ್ಯ ವೈಖರಿಯನ್ನು ಉದ್ದೇಶಿಸಿ ಮಾತು ಮುಂದುವರಿಸಿದ ಅವರು ಸರಕಾರ ಗ್ರಾ.ಪಂ.ಗಳಿಗೆ ಸಾಕಷ್ಟು ಅನುದಾನ ಬಿಡುಗಡೆಗೊಳಿಸುತ್ತಿದೆ.ಅದರ ಸದುಪಯೊಗ ಜನಸಾಮಾನ್ಯರಿಗೆ ತಲುಪುವಂತೆ ಗ್ರಾಮ ಪಂಚಾಯತ ಅಧಿಕಾರಿಗಳು ಶಕ್ತಿ ಮೀರಿ ಶ್ರಮಿಸಬೇಕು.ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಕೊಳ್ಳಲಾಗುವುದು ಎಂದು ಖಡಕ ಎಚ್ಚರಿಕೆ ನೀಡಿದರು.

ರವಿವಾರ ದಕ್ಷಿಣದ ಕಾಶಿ ಮತ್ತು ಕದಂಬರ ರಾಜಧಾನಿ ಎಂಬ ಇತಿಹಾಸ ಪ್ರಸಿದ್ಧ ಗ್ರಾಮ ಪಲಸಿಕಾ ಅಂದರೆ ಇಂದಿನ ಹಲಸಿ ಗ್ರಾಮದಲ್ಲಿ ವ್ಯಾಸತೀರ್ಥ ಮಂದಿರ ಉದ್ಯಾನವನ ಉದ್ಘಾಟಿಸಿ ಹಾಗೂ ದತ್ತ ಮಂದಿರ ಅಡಿಗಲ್ಲು ಸಮಾರಂಭದ ಮುಖ್ಯ ಅತಿಥಿ ಸ್ಥಾನ ವಹಿಸಿದ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

loading...