ಉತ್ತರ ಕರ್ನಾಟಕಕ್ಕೆ ೯ ಕಚೇರಿ ಸ್ಥಳಾಂತರ ! ಬೆಳಗಾವಿಗೆ ಸಿಕ್ಕಿದು ಮಾತ್ರ ಮೂರು ಕಚೇರಿ

0
1
loading...

ಉತ್ತರ ಕರ್ನಾಟಕಕ್ಕೆ ೯ ಕಚೇರಿ ಸ್ಥಳಾಂತರ !
ಬೆಳಗಾವಿಗೆ ಸಿಕ್ಕಿದು ಮಾತ್ರ ಮೂರು ಕಚೇರಿ
ಕನ್ನಡಮ್ಮ ಸುದ್ದಿ -ಬೆಳಗಾವಿ : ಉತ್ತರ ಕರ್ನಾಟಕದ ಜನತೆಯ ಬಹು ದಿನದ ಬೇಡಿಕೆಯಾಗಿದ್ದ ಪ್ರಮುಖ ಇಲಾಖೆ ಸ್ಥಳಾಂತರಕ್ಕೆ ಕೊನೆಗೂ ಸರಕಾರ ಸ್ಪಂಧಿಸಿದ್ದು, ಜನೆವರಿ ೧೦ರಂದು ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಆದರೆ ಈ ಕಚೇರಿಗಳು ಯಾವಾಗ ಕಾರ್ಯಾರಂಭ ಮಾಡಲಿವೆ ಎನ್ನುವ ಬಗ್ಗೆ sಸ್ಪಷ್ಟನೆಯಿಲ್ಲ.
ಕೃಷ್ಣಾ ಭಾಗ್ಯ ಜಲನಿಗಮ ಆಲಮಟ್ಟಿಗೆ, ಕರ್ನಾಟಕ ನೀರಾವರಿ ನಿಗಮ ದಾವಣಗೆರೆಗೆ, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ಬೆಳಗಾವಿಗೆ, ಸಕ್ಕರೆ ನಿರ್ದೇಶಕರು ಮತ್ತು ಕಬ್ಬು ಅಭಿವೃದ್ಧಿ ಆಯುಕ್ತರ ಕೇಂದ್ರ ಕಚೇರಿ ಬೆಳಗಾವಿಗೆ, ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿಭಜಿಸಿ ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕ ಕಚೇರಿ ಹುಬ್ಬಳ್ಳಿಗೆ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕರ ಕಚೇರಿ ಹಂಪಿಗೆ, ಮಾನವಹಕ್ಕುಗಳ ಆಯೋಗದ ಸದಸ್ಯರ ಪೈಕಿ ಒಬ್ಬ ಸದಸ್ಯರ ಕಚೇರಿ ಧಾರವಾಡಕ್ಕೆ, ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತರ ಪೈಕಿ ಒಂದು ಗುಲಬರ್ಗಾ ಮತ್ತೊಂದು ಬೆಳಗಾವಿಗೆ ಹಾಗೂ ಕರ್ನಾಟಕ ಉಪ ಲೋಕಾಯುಕ್ತರ ಪೈಕಿ ಒಂದು ಉಪ ಲೋಕಾಯುಕ್ತರ ಕಚೇರಿ ಧಾರವಾಡಕ್ಕೆ ಸ್ಥಳಾಂತರವಾಗಲಿದೆ.

loading...