ಏಕದಿನ ಮಾದರಿಯಲ್ಲಿ 100 ವಿಕೆಟ್‌ ಸಾಧನೆಗೆ ಭಾಜನರಾದ ಭುವನೇಶ್ವರ್‌ ಕುಮಾರ್‌

0
0
loading...

ಸಿಡ್ನಿ:- ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ಇಂದು ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ಸ್ವಿಂಗ್‌ ಮಾಸ್ಟರ್‌ ಭುವನೇಶ್ವರ್, ಏಕದಿನ ಮಾದರಿಯಲ್ಲಿ 100 ವಿಕೆಟ್‌ ಪಡೆದ ಸಾಧನೆಗೆ ಭಾಜನರಾದರು.
ಏಕದಿನ ಮಾದರಿಯಲ್ಲಿ 100 ವಿಕೆಟ್‌ ಪಡೆದ ಬೌಲರ್‌ಗಳಲ್ಲಿ ಭುವನೇಶ್ವರ ಕುಮಾರ್‌ ಭಾರತದ 19ನೇ ಪ್ರಮುಖ ಬೌಲರ್ ಆಗಿದ್ದಾರೆ. ಅಲ್ಲದೆ, ಈ ಸಾಧನೆಗೈದ 12ನೇ ಭಾರತದ ವೇಗಿಯಾಗಿ ಸ್ವಿಂಗ್ ಮಾಸ್ಟರ್‌ ಇಂದು ಹೊರಹೊಮ್ಮಿದರು.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇಂದು ನಡೆದ ಮೊದಲ ಕಾದಾಟದ ಮೂರನೇ ಓವರ್‌ನಲ್ಲಿ ಆಸ್ಟ್ರೇಲಿಯಾ ನಾಯಕ ಆ್ಯರೊನ್‌ ಫಿಂಚ್(5 ರನ್‌) ಅವರ ವಿಕೆಟ್‌ ಪಡೆಯುವ ಮೂಲಕ ಭುವನೇಶ್ವರ್ ಕುಮಾರ್‌ ಈ ಮೈಲಿಗಲ್ಲು ಸೃಷ್ಟಿಸಿದರು.
ಭುವನೇಶ್ವರ್‌ ಕುಮಾರ್ ಅವರು 96ನೇ ಪಂದ್ಯದಲ್ಲಿ 100 ವಿಕೆಟ್ ಪಡೆದರು. ಆ ಮೂಲಕ ಅವರು 100 ವಿಕೆಟ್‌ ಪಡೆದ ನಾಲ್ಕನೇ ನಿಧಾನಗತಿಯ ಬೌಲರ್‌ ಎನಿಸಿಕೊಂಡರು. ಹಲವು ಬಾರಿ ಕೊನೆಯ ಓವರ್‌ಗಳಲ್ಲಿ ತಂಡಕ್ಕೆ ಭುವನೇಶ್ವರ್‌ ನೆರವಾಗಿದ್ದಾರೆ.
ಅತಿ ವೇಗವಾಗಿ 100 ವಿಕೆಟ್ ಪಡೆದ ಭಾರತದ ವೇಗದ ಬೌಲರ್‌ಗಳಲ್ಲಿ ಎಡಗೈ ವೇಗಿ ಇರ್ಫಾನ್‌ ಪಠಾಣ್‌ ಮುಂಚೂಣಿಯಲ್ಲಿದ್ದಾರೆ. ಅವರು 59 ಪಂದ್ಯಗಳಲ್ಲಿ 100 ವಿಕೆಟ್‌ ಪಡೆದು ಸಾಧನೆ ಮಾಡಿದ್ದರು. ಅಫ್ಘಾನಿಸ್ತಾನ ತಂಡದ ರಶೀದ್ ಖಾನ್‌ 44 ಪಂದ್ಯಗಳಲ್ಲಿ 100 ವಿಕೆಟ್‌ ಪಡೆದು ಇತ್ತೀಚೆಗೆ ಸಾಧನೆ ಮಾಡಿದ್ದರು

loading...