ಐಟಿ ಕಚೇರಿಗೆ ನಟ ಯಶ್ ಹಾಜರು

0
0
loading...

ಬೆಂಗಳೂರು:-ಆದಾಯ ತೆರಿಗೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರ ನಟ ಯಶ್ ಇಂದು ಐಟಿ ಕಚೇರಿಗೆ ಹಾಜರಾಗಿದ್ದಾರೆ.
ಕಳೆದ ಕೆಲದಿನಗಳ ಹಿಂದೆ ಆದಾಯ ತೆರಿಗೆ ಅಧಿಕಾರಿಗಳು ಐವರು ಚಿತ್ರನಟರು ಹಾಗೂ ಅನೇಕ ನಿರ್ಮಾಪಕರ ಮನೆಗಳ ಮೇಲೆ ದಾಳಿ ನಡೆಸಿ 109 ಕೋಟಿ ರೂಪಾಯಿ ಲೆಕ್ಕ ಇಲ್ಲದ ಆಸ್ತಿಪಾಸ್ತಿ ಪತ್ತೆ ಹಚ್ಚಿ ವಿಚಾರಣೆಗೆ ಹಾಜರಾಗುವಂತೆ ನಟ ಯಶ್ ಅವರಿಗೆ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಟ ಯಶ್ ಅವರು ತಮ್ಮ ತಾಯಿ ಪುಷ್ಪಾ ಜೊತೆ ಐಟಿ ಕಚೇರಿಗೆ ಹಾಜರಾಗಿದ್ದಾರೆ.
ಇದಕ್ಕೂ ಮೊದಲು ದಾಳಿಗೆ ಸಂಬಂಧಪಟ್ಟಂತೆ ಪುನೀತ್ ರಾಜ್‌ಕುಮಾರ್ ಸಹ ಐಟಿ ಕಚೇರಿಗೆ ಭೇಟಿ ನೀಡಿ ಆದಾಯದ ಬಗ್ಗೆ ವಿವರಣೆ ನೀಡಿದ್ದರು.

loading...