ಕಳ್ಳತನವಾಗಿದ್ದ ದ್ವಿಚಕ್ರ ವಾಹನ ಪೊಲೀಸ್ ವಶಕ್ಕೆ

0
31
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಕಳೆದ ಮೂರು ತಿಂಗಳ ಹಿಂದೆ ಕಳ್ಳತನವಾಗಿದ್ದ ವಾಹನಗಳನ್ನು ಮಾರ್ಕೇಟ್ ಪೊಲೀಸ್ ಠಾಣೆ ಪೊಲೀಸ್ ರು ಶನಿವಾರ ಪತ್ತೆ ಹಚ್ಚಿ, ವಶಕ್ಕೆ ಪಡೆದುಕೊಂಡಿದ್ದಾರೆ.2 ಹಿರೋ ಹೊಂಡಾ, ಯ್ಯಾಕ್ಟಿವಾ 2, ಟಿವಿಎಸ್ 1, ಪ್ಲಾಟಿನಾ 1,ಡಿವ್ 1 ಸೇರಿ ಒಟ್ಟು ಏಳು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಕಳೆದ ಕೆಲವು ದಿನಗಳಿಂದ ನಗರದಲ್ಲಿ ಕಿಡಿಗೆಡಿಗಳು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿ, ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟು ಮಾಡುತ್ತಿದ್ದರು, ಆರೋಪಿಗಳನ್ನು ಬಂಧಿಸುವಂತೆ ಸಾರ್ವಜನಿಕರು ದೂರು ನೀಡಿದರು. ದೂರಿ
ಅನ್ವಯ ತನಿಖೆ ಕೈಗೊಂಡ ಪೊಲೀಸ್ ರಿಗೆ ಮೂರು ತಿಂಗಳ ಹಿಂದೆ ಕಳ್ಳತನವಾಗಿದ ಏಳು ಬೈಕ್ ಪತ್ತೆಯಾಗಿವೆ. ಇವುಗಳನ್ನು ನಗರದ ವಿವಿಧ ಸ್ಥಳಗಲ್ಲಿಯೇ ನಿಲ್ಲಿಸಿ ಬಿಟ್ಟು ಹೊಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ‌.

loading...