ಖೇಲೋ ಇಂಡಿಯಾ ಯುವ ಕ್ರೀಡಾಕೂಟ: ಮಿಜೋರಾಂ ವಿರುದ್ಧ ಗೆದ್ದ ಕರ್ನಾಟಕ

0
0
loading...

ಪುಣೆ:- ಮಹಾರಾಷ್ಟ್ರದ ಫುಣೆಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯುವ ಕ್ರೀಡಾಕೂಟದ 17 ವಯೋಮಿತಿ ಫುಟ್ಬಾಲ್‌ ವಿಭಾಗದ ಪಂದ್ಯದಲ್ಲಿ ಕರ್ನಾಟಕ ಬಾಲಕರ ತಂಡ
ಮಿಜೋರಾಂ ವಿರುದ್ಧ 4-1 ಅಂತರದಲ್ಲಿ ಜಯ ಸಾಧಿಸಿತು. ಇದೇ ವಯೋಮಿತಿಯ ಕೇರಳ ಬಾಲಕಿಯರ ತಂಡ ಹಿಮಾಚಲ ಪ್ರದೇಶವನ್ನು 28-0 ಬೃಹತ್‌ ಅಂತರದಲ್ಲಿ ಸೋಲಿಸಿತು. ಇನ್ನು, ಓಡಿಶಾ ಬಾಲಕಿಯರು 2-0 ಅಂತರದಲ್ಲಿ ಮಹಾರಾಷ್ಟ್ರವನ್ನು ಮಣಿಸಿತು.
21 ವಯೋಮಿತಿ ಬಾಲಕರ ವಿಭಾಗದಲ್ಲಿ ಕೇರಳ ಹಾಗೂ ಚಂಡೀಗಢ ನಡುವಿನ ಪಂದ್ಯ 1-1 ಸಮಬಲದೊಂದಿಗೆ ಡ್ರಾನಲ್ಲಿ ಸಮಾಪ್ತಿಯಾಯಿತು. ಇದೇ ಮಾದರಿಯ ಪಂದ್ಯದಲ್ಲಿ ಮಿಜೋರಾಂ 3-0 ಅಂತರದಲ್ಲಿ ಮಹಾರಾಷ್ಟ್ರವನ್ನು ಮಣಿಸಿತು. ಬಾಲಕಿಯರ ವಿಭಾಗದಲ್ಲಿ ತಮಿಳುನಾಡು 1-0 ಅಂತರದಿಂದ ಓಡಿಶಾವನ್ನು ಸೋಲಿಸಿದರೆ, ಮಿಜೋರಾಂ ಬಾಲಕಿಯರು 13-0 ಅಂತರದಲ್ಲಿ ಹಿಮಾಚಲಪ್ರದೇಶದ ವಿರುದ್ಧ ಭರ್ಜರಿ ಜಯ ಸಾಧಿಸಿತು.
17 ವಯೋಮಿತಿ ಪಂಜಾಬ್‌ ತಂಡ 6-1 ಅಂತರದಲ್ಲಿ ಉತ್ತರಾಖಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು.

loading...