ಗಾಂಜಾ ಮಾರಾಟ: ಮೂವರ ಆರೋಪಿಗಳ ಬಂಧನ

0
2
loading...

ಗಾಂಜಾ ಮಾರಾಟ: ಮೂವರ ಆರೋಪಿಗಳ ಬಂಧನ
ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ಪಿಂಪಳಕಟ್ಟಾ ಹತ್ತಿರ ಅಕ್ರಮವಾಗಿ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಮಾರ್ಕೇಟ್ ಪೊಲೀಸ್ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಕೋತ್ವಾಲ ಗಲ್ಲಿಯ ನಾಜೀಮ್ ಅಲ್ಲವಾವುದ್ದಿನ್ ಮುಲ್ಲಾ, ಟಿಳಕವಾಡಿಯ ಪ್ರಿಯಾಂಕ ವಿನೋದ ನಂದಗಡಕರ, ಕಲೈಗಾರ ಗಲ್ಲಿಯ ಮುಸ್ತಾಕ್ ಮೊಹಮ್ಮದಗೌಸ ಬಾಗವಾನ ಬಂಧಿತರು. ಪೊಲೀಸರ ವಿಚಾರಣೆ ವೇಳೆ ಅನಧಿಕೃತವಾಗಿ ಗಾಂಜಾ ತಂದು ಬೆಳಗಾವಿ ನಗರದಲ್ಲಿ ಮಾರಾಟ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.
ಮಾರ್ಕೆಟ್ ಎಸಿಪಿ ನಾರಾಯಣ ಭರಮನಿ ಅವರ ನೇತ್ರತ್ವದಲ್ಲೇ ಆರೋಪಿಗಳನ್ನು ಬಂಧಿಸಿ ಅವರಲ್ಲಿದ್ದ ೧೫ಸಾವಿರ ಬೆಲೆ ಬಾಳುವ ೧ ಕೆ.ಜಿ ೫೦೦ ಗ್ರಾಮ ಗಾಂಜಾ ಹಾಗೂ ೩೬೦ರೂ ವಶ ಪಡಿಸಿಕೊಂಡು ,ಗಾಂಜಾ ಮಾರಾಟದ ಜಾಲ ಪತ್ತೆ ಹಚ್ಚಲು ತನಿಖೆಯನ್ನು ನಡೆಸಿದ್ದಾರೆ.

loading...