ಚೀರನೂತನ ಸಂಸ್ಥೆಯಿಂದ 12ರಂದು ವಿವೇಕ-ದರ್ಶನ” ಕಾರ್ಯಕ್ರಮ

0
7
ಕನ್ನಡಮ್ಮ ಸುದ್ದಿ- ಬೆಳಗಾವಿ : ಸ್ವಾಮಿ ವಿವೇಕಾನಂದರ 156ನೇ ಜನ್ಮದಿನೋತ್ಸವ ನಿಮಿತ್ತವಾಗಿ ರಾಷ್ಟ್ರೀಯ ಯುವ ದಿನ ಆಚರಣೆ ಮೂಲಕ
“ವಿವೇಕ-ದರ್ಶನ” ಎಂಬ‌ ವಿಶೇಷ ಕಾರ್ಯಕ್ರಮವನ್ನು ಇದೇ ಜ.12ರಂದು ಗದಗ ಜಿಲ್ಲೆಯ ಲಕ್ಷೇಶ್ವರದ ಸರ್ಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ಮಧ್ಯಾಹ್ನ 12ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಚೀರನೂತನ ಸಂಸ್ಥೆ ಯ ಅಧ್ಯಕ್ಷ ಎಂ.ಬಿ ಕೊಟ್ರೇಶ,ಕಾರ್ಯದರ್ಶಿ ಷಣ್ಮುಖ ಅವರು ತಿಳಿಸಿದ್ದಾರೆ.
ಸ್ವಾಮಿ ವಿವೇಕಾನಂದರೆಂದರೆ ನಿಜವಾದ ಅರ್ಥದಲ್ಲಿ ಒಬ್ಬ ಕ್ರಾಂತಿದರ್ಶಿ. ಮೇಲ್ನೋಟಕ್ಕೆ ಖಾವಿ ತೊಟ್ಟು ಸನ್ಯಾಸಿಯಂತಿದ್ದರೂ ಅವರ ಆಂತರ್ಯದಲ್ಲಿ ಶ್ರೀಸಾಮಾನ್ಯನನ್ನು ಉದ್ಧರಿಸುವ ವಿಚಾರಗಳ ಪ್ರಚಂಡ ಆಂದೋಲನವೇ ನಡೆಯುತ್ತಿತ್ತು. ಆಗ ಮಡುಗಟ್ಟಿದ್ದ ಎಲ್ಲಾ ಬಗೆಗೆ ಅರ್ಥಹೀನ ಸಂಗತಿಗಳ ಬಗ್ಗೆಯೂ ದಟ್ಟವಾಗಿ ಮಾತನಾಡಿದವರು ಅವರ ಜನ್ಮ ದಿನೋತ್ಸವದ ಅಂಗವಾಗಿ ವಿವೇಕ ದರ್ಶನ ಕಾರ್ಯಕ್ರಮ ನಡೆಸಲಾಗುತ್ತಿದೆ.
ಕಾರ್ಯಕ್ರಮದ ಅಧ್ಯಕ್ಷತೆ ಕಾಲೇಜ್  ಪ್ರಿನ್ಸಿಪಾಲ್ ಯಲವಿಗಿ, ಉಪನ್ಯಾಸಕರಾಗಿ ಈಶ್ವರ ಮೆಡ್ಲೇರಿ ಶಿಕ್ಷಕರು ಆಗಮಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
loading...