ಜ್ಞಾನ ,ಶಿಕ್ಷಣ ಒಂದೇ ನಾಣ್ಯದ ಎರಡು ಮುಖ: ಪಿಡಿಓ ಪ್ರಶಾಂತ ತೊಟಗಿ

0
0
loading...

ಜ್ಞಾನ ,ಶಿಕ್ಷಣ ಒಂದೇ ನಾಣ್ಯದ ಎರಡು ಮುಖ: ಪಿಡಿಓ ಪ್ರಶಾಂತ ತೊಟಗಿ

ಕನ್ನಡಮ್ಮ ಸುದ್ದಿ-ಸವದತ್ತಿ: ಸಾಧನೆ ಹಾದಿ ಹಿಡಿದವನಿಗೆ ಶಿಕ್ಷಣ ಮತ್ತು ಜ್ಞಾನ ಅತ್ಯವಶ್ಯಕವಾಗಿದೆ. ಜ್ಞಾನ ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖವಿದ್ದಂತೆ ಎಂದು ಚುಳಕಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಪ್ರಶಾಂತ ತೋಟಗಿ ಹೇಳಿದರು.
ತಾಲೂಕಿನ ಉಗರಗೋಳ ಗ್ರಾಮದ ಶ್ರಿÃ ಬಸವಜ್ಯೊÃತಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ಸಂಜೆ ಜರುಗಿದ ವಾರ್ಷಿಕ ಸ್ನೆÃಹ ಸಮ್ಮೆÃಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗುಣಮಟ್ಟದ ಶಿಕ್ಷಣಕ್ಕಿಂತ ಮಕ್ಕಳಿಗೆ ಶಿಕ್ಷಕರು ನೀಡುವ ಉಡುಗೋರೆ ಬೇರೊಂದಿಲ್ಲ. ಮಕ್ಕಳ ಪಠ್ಯ ಹಾಗೂ ಪಠ್ಯೆÃತರ ಚಟುವಟಿಕೆಗಳಲ್ಲಿ ಶಿಕ್ಷಕರ ಮತ್ತು ಪಾಲಕರ ಪಾತ್ರ ದೊಡ್ಡದಿದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಪ್ರಚಲಿತ ಸುದ್ದಿಗಳ ಜ್ಞಾನಕ್ಕೆ ಒತ್ತು ನೀಡಿ ಮಕ್ಕಳ ಸರ್ವಾಂಗೀಣ ಅಭಿವೃದಿಗಾಗಿ ಮತ್ತು ಭಾವಿ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಸಹಕರಿಸಬೇಕಿದೆ.
ಗ್ರಾಮಗಳಲ್ಲಿ ಶಾಲಾ ವಾರ್ಷಿಕೊತ್ಸವಕ್ಕೆ ಮುದ್ದು ಮಕ್ಕಳ ಕಾರ್ಯಕ್ರಮ ವಿಕ್ಷಿಸಲು ಇಷ್ಟೊÃಂದು ಜನ ಸೇರಿರುವದು ನಿಜಕ್ಕೂ ಖುಷಿಯ ವಿಚಾರವಾಗಿದೆ. ಈ ಶಾಲೆಯು ಗುಣಮಟ್ಟದ ಶಿಕ್ಷಣ ಜೊತೆಗೆ ಮನರಂಜನೆ ಕಾರ್ಯಕ್ರಮಗಳನ್ನು ನೀಡಿ ಮಕ್ಕಳನ್ನು ತಳಮಟ್ಟದಿಂದ ಎಲ್ಲ ರೀತಿಯಲ್ಲಿ ಸಭಲರನ್ನಾಗಿ ಮಾಡಲು ಶ್ರಮಿಸುತ್ತಿರುವ ಶಿಕ್ಷಕ ವೃಂದದ ಕಾರ್ಯ ಶ್ಲಾಘಣೀಯ ಎಂದರು.
ನಿವೃತ್ತ ಮುಖ್ಯೊÃಪಾಧ್ಯಯ ಎಸ್.ಎಲ್ ಅಂಗಡಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಶಿಸ್ತು, ಸಮಯ ಪ್ರಜ್ಞೆ ಪಾಠ ಕಲಿಯಬೇಕಿದೆ. ಇನ್ನು ಈ ಶಾಲೆಯಲ್ಲಿ ಕಲಿತ ಮಕ್ಕಳು ಇಂದು ನವೋದಯ, ಕಿತ್ತೂರ ರಾಣಿ ಚನ್ನಮ್ಮ, ಮುರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಆಯ್ಕೆಯಾಗಿ ಶಾಲೆ, ಗ್ರಾಮ ಮತ್ತು ತಾಲೂಕಿನ ಕೀರ್ತಿಯನ್ನು ಜಿಲ್ಲೆಯಾದ್ಯಂತ ಎತ್ತಿ ಹಿಡಿದಿದ್ದಾರೆ. ಈ ಕಾರ್ಯ ಹೀಗೆ ಮುಂದುವರೆಯಲಿ ಎಂದರು.
ನೂತನ ಗ್ರಾ.ಪಂ ಅಧ್ಯಕ್ಷರಾಗಿ ಆಯ್ಕೆಗೊಂಡ ಕೃಷ್ಣಪ್ಪ ಲಮಾಣಿ ಮತ್ತು ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸತ್ಕರಿಸಲಾಯಿತು. ಪಠ್ಯ ಹಾಗೂ ಪಠ್ಯೆÃತರ ಚಟುವಟಿಕೆಯಲ್ಲಿ ಭಾಗವಹಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೇರೆದಂತ ಪ್ರೆÃಕ್ಷಕರರನ್ನು ರಂಜಿಸಿದರು.
ನಿರ್ವಾಣೇಶ್ವರ ಮಠದ ಮಹಾಂತ ಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿದ್ದರು. ಶಾಲಾ ಸಂಸ್ಥೆಯ ಅಧ್ಯಕ್ಷ ಜ್ಞಾನೇಶ್ವರ ಕೊಪ್ಪದ, ಗ್ರಾ.ಪಂ ಉಪಾಧ್ಯಕ್ಷೆ ಬಸವ್ವ ಗುಡೆನ್ನವರ, ಎಸ್.ಟಿ.ನರಗುಂದ, ವೈ.ಎಸ್. ಸಂಬರಗಿ, ವೈ.ಪಿ. ಸಾವಕ್ಕನವರ, ಎನ್.ಎಸ್. ಹರಳಕಟ್ಟಿ, ಎನ್.ಎಸ್. ಗೋವಪ್ಪನವರ, ಎಮ್.ಎ. ಗುಡೆನ್ನವರ, ಎಸ್.ಎಚ್. ಕೊಪ್ಪದ, ವಿ.ಎಫ್. ಗುಡೆನ್ನವರ, ಕೆ.ಎನ್. ತೋಟಗಿ, ಮಲ್ಲಪ್ಪ ಸಿದ್ದಕ್ಕನವರ, ಪಿ.ಜಿ. ತಿಪರಾಶಿ, ನಾಗಪ್ಪ ಕುರಟ್ಟಿ ಸೇರಿದಂತೆ ಶಾಲಾ ಸಿಬ್ಬಂದಿ ಮತ್ತು ಪಾಲಕರು ಇದ್ದರು.

loading...