ಜ. 19ಕ್ಕೆ ತೆಪ್ಪೋತ್ಸವಕ್ಕೆ ಸಿದ್ಧವಾಗುತ್ತಿರುವ ಗವಿಮಠದ ಕೆರೆ

0
0
loading...

ಕನ್ನಡಮ್ಮ ಸುದ್ದಿ-ಕೊಪ್ಪಳ : ನಗರದ ಶ್ರೀಗವಿಸಿದ್ಧೇಶ್ವರ ಜಾತ್ರೆಗೆ ದಿನಗಣನೆ ಆರಂಭವಾಗಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ 19 ರಂದು ಜರುಗುವ ತೆಪ್ಪೋತ್ಸವ ಕಾರ್ಯಕ್ರಮಕ್ಕೆ ಶ್ರೀ ಗವಿಮಠದ ಕೆರೆಯು ಸಂಪೂರ್ಣ ಸಿದ್ದಗೊಂಡಿದೆ, 4 ಎಕರೆ 20 ಗುಂಟೆ ವಿಶಾಲವಾದ ಜಾಗೆಯಲ್ಲಿ ಪುನರ್ ನಿರ್ಮಾಣಗೊಂಡಿರುವ ಕೆರೆ 600 ಅಡಿ ಉದ್ದ 280 ಅಡಿ ಅಗಲ ಮತ್ತು 18 ಅಡಿ ಆಳವನ್ನು ಹೊಂದಿದ್ದು 4.86 ಕೋಟಿ ಲೀಟರ್ ಗಳಷ್ಟು ನೀರಿನ ಸಂಗ್ರಹಣಾ ಸಾಮಥ್ರ್ಯ ಹೊಂದಿದೆ. ನೀರಿನಿಂದ ತುಂಬಿರುವ ಈ ಕೆರೆಯು ಪ್ರಕೃತಿಯ ರಮ್ಯತೆಯನ್ನು ಮೆರೆಯುತ್ತಲಿದೆ. ಅನೇಕ ಜಲಚರಪಕ್ಷಿಗಳು ಬೆಳಗಿನ ಜಾವ ಮತ್ತು ಸಾಯಂಕಾಲ ಕೆರೆಯಲ್ಲಿ ಪಕ್ಷಿಗಳು ಬೀಡು ಬಿಟ್ಟು ಗವಿಮಠಕ್ಕೆ ಮೆರಗು ತಂದುಕೊಟ್ಟಿದೆ. ಇಂತಹ ಸುಂದರವಾದ ಕೆರೆಯಲ್ಲಿ ದಿನಾಂಕ 19 ರಂದು ತೆಪ್ಪೋತ್ಸವ ಕಾರ್ಯಕ್ರಮ ಸಂಜೆ 5 ಗಂಟೆಗೆ ಜರುಗಲಿದ್ದೂ ಆ ದಿನ ಬಣ್ನ ಬಣ್ಣದ ವಿದ್ಯೂತ್ ದೀಪಗಳಿಂದ ಅಲಕೃತಗೊಂಡು ಮತ್ತಷ್ಟು ಮೆರಗನ್ನು ಹೆಚ್ಚಿಸಲಿದೆ.
ತೆಪ್ಪೋತ್ಸವ ಏನಿದು? : ತೆಪ್ಪೋತ್ಸವ ಎಂದರೆ ಬಾವಿ, ಕೆರೆ, ನದಿಗಳಲ್ಲಿ ತೆಪ್ಪದ ಮೇಲೆ ನಡೆಯುವ ದೇವರ ಉತ್ಸವೆಂದು ಅರ್ಥ. ತೆಪ್ಪದÀ ನಡುವೆ ಹಲಗೆಯಿಂದ ನಿರ್ಮಿಸಲಾದ ವೇದಿಕೆಯಲ್ಲಿ ಶ್ರೀ ಗವಿಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಾಧಿ ಕೈಂಕರ್ಯಗಳನ್ನು ಸಾಂಗವಾಗಿ ನೆರವೇರಿಸಿದ ತರುವಾಯ ಮಂಗಳ ವಾಧ್ಯಗಳೊಂದಿಗೆ ಕೆರೆಯಲ್ಲಿ ಐದು ಸುತ್ತು ಜಯಘೋಷದೊಂದಿಗೆ ಪ್ರದಕ್ಷಿಣೆ ಹಾಕುವದರ ಮೂಲಕ ತೆಪ್ಪೋತ್ಸವ ನೆರವೇರುವದು. ತೆಪ್ಪಕ್ಕೆ ಬಾಳೆ, ಮಾವು, ತೆಂಗು ಮತ್ತು ಕಂಗುಗಳಿಂದ ಅಲಂಕಾರ ಗೊಳಿಸಲಾಗಿರುವದು. ವೈವಿದ್ಯಮಯ ಬಣ್ಣ ಬಣ್ಣದ ಹೂವುಗಳಿಂದ ಜೊತೆಗೆ ಬಣ್ಣ ಬಣ್ಣದ ವಿದ್ಯೂತ್ ದೀಪಗಳಿಂದ ತೆಪ್ಪವನ್ನು ಅಲಂಕೃತಗೊಳಿಸಲಾಗಿರುತ್ತದೆ. ತೆಪ್ಪವನ್ನು ನಾಲ್ಕು ದಿಕ್ಕುಗಳಲ್ಲಿÀ ಅಂಬಿಗರು ಹುಟ್ಟು ಹಾಕಿ ಕೆರೆಯಲ್ಲಿ ಪ್ರದಕ್ಷಿಣೆ ಮಾಡಿಸುವರು. ಆಗಮಿಸಿದ ಭಕ್ತರು ಶ್ರೀ ಗವಿಸಿದ್ಧೇಶ್ವರನಿಗೆ ಜಯಘೋಷಗಳನ್ನು ಕೂಗುತ್ತಾ ಧನ್ಯತಾ ಭಾವವನ್ನು ವ್ಯಕ್ತಪಡಿಸುತ್ತಾರೆ. ಕಾಸನಕಂಡಿ ಗ್ರಾಮದ ಹತ್ತಿರವಿರುವ ತುಂಗಭದ್ರಾ ನದಿಯಿಂದ ಕೆರೆಗೆ ನೀರನ್ನು ತುಂಬಿಸಿಕೊಳ್ಳಲಾಗುತ್ತಿದೆ. ನೀರಿನಂದ ತುಂಬಿರುವ ಈ ಕೆರೆಯ ಮಧ್ಯಭಾಗದಲ್ಲಿನ ಮಂದಿರದಲ್ಲಿ ಗವಿಮಠದ 15 ನೇ ಪೀಠಾಧಿಪತಿಗಳಾದ ಲಿಂ.ಶ್ರೀ ಶಿವಶಾಂತವೀರ ಸ್ವಾಮಿಗಳ (ಗಡ್ಡದಜ್ಜ) ಮೂರ್ತಿ ಇದ್ದು ಭಕ್ತರಿಗೆ ದರ್ಶನಕ್ಕೆ ಹೋಗಿ ಬರಲು ಸೇತುವೆ ನಿರ್ಮಾಣ ಮಾಡಲಾಗಿದೆ. ಅಜ್ಜನ ಜಾತ್ರೆಗೆ ಆಹ್ವಾನ : ಕೊಪ್ಪಳ: ನಗರದ ಶ್ರೀಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಈಗಾಗಲೆ ಭರದಿಂದ ಕಾರ್ಯಗಳು ಜರುಗಿದ್ದು ಭಕ್ತಾಧಿಗಳನ್ನು ಆಮಂತ್ರಿಸಲು ಆಮಂತ್ರಿಸಲು ಆಮಂತ್ರಣ ಪತ್ರಿಕಾ ಸಿದ್ದಗೊಂಡಿದೆ. ಶ್ರೀ ಮಠದ ಕನಕರಾಜ ಎಚ್ ಎಸ್ ಎಂಬ ವಸತಿನಿಲಯದ ವಿದ್ಯಾರ್ಥಿಯೊಬ್ಬ ಜಾತ್ರೆಗೆ ಬನ್ನಿ ಎಂಬ ಚಿತ್ರವನ್ನು ಶ್ರೀಗವಿಸಿದ್ಧೇಶ್ವರ ಮೂರ್ತಿಯ ಭಾವಚಿತ್ರದೊಂದಿಗೆ ಬಿಡಿಸಿರುವ ಆಮಂತ್ರಣ ಪತ್ರಿಕೆ ಬಹಳಷ್ಟು ಸುಂದರವಾಗಿ ಕಾಣುತ್ತಿದೆ. ಬಾಲಕನ ಕಲೆಯನ್ನು ಶ್ರೀಗಳು ಪ್ರಶಂಶಿಸಿ ಆಶಿರ್ವದಿಸಿದ್ದಾರೆ.
ಜಾತ್ರೆಗೆ ಬರುವ ಭಕ್ತಾಧಿಗಳಿಗಾಗಿ ಅಚ್ಚುಕಟ್ಟಾದ ಪಾರ್ಕಿಂಗ್ ವ್ಯವಸ್ಥೆ : ನಗರದ ಶ್ರೀಗವಿಸಿದ್ಧೇಶ್ವರ ಜಾತ್ರೆಗೆ ದಿನಗಣನೆ ಆರಂಭವಾಗಿದೆ. ಇದೇ ಜನೆವರಿ 22 ರಂದು ಜರುಗುವ ಮಹಾರಥೋತ್ಸವದಲ್ಲಿ ಜಾತ್ರೆಗೆ ಬಂದು ಹೋಗುವ ಮೋಟಾರುವಾಹ£ಗಳು, ಚಕ್ಕಡಿಗಳಿಗಾಗಿ ವಿಶೇಷ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. 22-01-2019 ರಿಂದ 24-01-2019 ರವರೆಗೆ ಗವಿಮಠಕ್ಕೆ ಬರುವ ನಾಲ್ಕೂ ಕಡೆಗಳಲ್ಲಿ ಈ ಕೆಳಕಂಡಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಹೊಸಪೇಟೆ/ಗಂಗಾವತಿ ಮಾರ್ಗದಿಂದ ಬರುವ ವಾಹನಗಳಿಗಾಗಿ ಕುಟೀರ ಫ್ಯಾಮಿಲಿ ರೆಸ್ಟೋರೆಂಟ್ ಪಕ್ಕದಿಂದ ಗೋಪನಕೊಪ್ಪ ಆಸ್ಪತ್ರೆಯ ಬದಿಯ ಮೂಲಕ ಡಾಲರ್ಸ ಕಾಲೋನಿಯಿಂದ ನೇರವಾಗಿ ಮಠದ ಹತ್ತಿರ ಬರಲು ಹೊಸ ರಸ್ತೆ ನಿರ್ಮಾಣವಾಗಿದೆ.ಅಲ್ಲಿ ದ್ವಿಚಕ್ರ, ಕಾರು, ಟ್ರ್ಯಾಕ್ಟರ್, ಲಾರಿ ಇವುಗಳಿಗೆ ಸಹ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕುಷ್ಟಗಿ ರಸ್ತೆಯಿಂದ ಬರುವ ವಾಹನಗಳಿಗಾಗಿ ಕುಷ್ಟಗಿ ರೈಲ್ವೆ ಗೇಟ್ ಮತ್ತು ಬಜಾಜ್ ಷೋರೂಮ್ ಹಿಂದುಗಡೆ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿರುತ್ತದೆ. ಗದಗ ರಸ್ತೆಯಿಂದ ಬರುವ ವಾಹನಗಳಿಗಾಗಿ ಹಳೆಯ ಸಾರ್ವಜನಿಕ ಮೈದಾನ ಮತ್ತು ಎ.ಪಿ.ಎಂ.ಸಿ. ಯಾರ್ಡನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕುಣಿಕೇರಿ ಮತ್ತು ಹಾಲವರ್ತಿ ರಸ್ತೆಗಳಿಂದ ಬರುವ ವಾಹನಗಳಿಗಾಗಿ ಶ್ರೀಮಠದ ಹಿಂಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಿಂದೋಗಿ, ಗೊಂಡಬಾಳ ಕಡೆಯಿಂದ ಗಡಿಯಾರ ಕಂಭದ ಮೂಲಕ ಬರುವ ವಾಹನಗಳಿಗೆ ಪಾಂಡುರಂಗ ದೇವಸ್ಥಾನದ ಹಿಂಭಾಗದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಈ ವರ್ಷ ಗವಿಸಿದ್ಧೇಶ್ವರ ಮಹಾರಥೋತ್ಸವದಲ್ಲಿ 5 ಲಕ್ಷಕ್ಕಿಂತಲೂ ಹೆಚ್ಚು ಭಕ್ತಜನರು ಪಾಲ್ಗೊಳ್ಳುವದರಿಂದ ರಥೋತ್ಸವ ಜರುಗಲಿರುವ ಮೈದಾನದ ಒಳಗಡೆ ಶಾಂತಿ ಹಾಗೂ ಸುವ್ಯವಸ್ಥೆಯ ಶಿಸ್ತಿನ ಅಗತ್ಯತೆ ಇದೆ. ಆದ್ದರಿಂದ ಎತ್ತಿನ ಬಂಡಿಗಳನ್ನು, ದ್ವಿಚಕ್ರ, ಕಾರು, ಟ್ರ್ಯಾಕ್ಟರ್, ಟಾಂ.ಟಾಂ ಹಾಗೂ ಲಾರಿಗಳನ್ನು ಈ ಮೇಲೆ ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿ ನಂತರ ಮೈದಾನದ ಒಳಗಡೆ ಆಗಮಿಸಿ ರಥೋತ್ಸವದಲ್ಲಿ ಭಾಗವಹಿಸಬೇಕು.ಹೆಚ್ಚಿನ ಮಾಹಿತಿಗಾಗಿ ವಿರೇಶ ಭಾವಿಕಟ್ಟಿ. ಮೊಬೈಲ್- 8884942666 ಸಂರ್ಪಿಸಬೇಕೆಂದು ಗವಿಮಠದ ಪ್ರಕಟಣೆ ತಿಳಿಸಿದೆ. ಮಹಾದಾಸೋಹಕ್ಕೆ ಹರಿದು ಬರುತ್ತಿರುವ ದವಸ-ಧಾನ್ಯ, ರೊಟ್ಟಿ ನಗರದ ಶ್ರೀಗವಿಸಿದ್ಧೇಶ್ವರ ಜಾತ್ರೆಗೆ ದಿನಗಣನೆ ಆರಂಭವಾಗಿದೆ. ಜಾತ್ರೆ ಮಹಾದಾಸೋಹಕ್ಕೆ ಈಗಾಗಲೇ ದವಸ – ಧಾನ್ಯರೊಟ್ಟಿಗಳನ್ನು ಭಕ್ತಾಧಿಗಳು ಅರ್ಪಿಸುತ್ತಿದ್ದು ಇಂದು ಕಾಮನೂರಿನ ಭಕ್ತರಿಂದ 5 ಕ್ವಿಂಟಾಲ್ ಜೋಳದಿಂದ 10 ಸಾವಿರ ರೊಟ್ಟಿ, ದವಸ ಧಾನ್ಯಗಳು, ಚಿಕ್ಕಬೊಮ್ಮನಾಳ ಗ್ರಾಮದ ಭಕ್ತರಿಂದ 3 ಸಾವಿರ ರೊಟ್ಟಿ, ದವಸ ಧಾನ್ಯಗಳು, ಆಗೋಲಿ ಗ್ರಾಮದ ಭಕ್ತರಿಂದ 500 ರೊಟ್ಟಿ, ದವಸ ಧಾನ್ಯಗಳು, ನಿಡಶೇಸಿ ಗ್ರಾಮದ ಭಕ್ತರಿಂದ 6 ಸಾವಿರ ರೊಟ್ಟಿಗಳು, ಕೆಸಲಾಪುರ ಗ್ರಾಮದಿಂದ 500 ರೊಟ್ಟಿ, ದವಸಧಾನ್ಯಗಳು ಗವಿಮಠದ ಮಹಾದಾಸೋಹದಲ್ಲಿ ಸಮರ್ಪಣೆ ಮಾಡಿದ್ದಾರೆ. ದಾನಿಗಳಿಗೆ ಪೂಜ್ಯರು ಆಶಿರ್ವದಿಸಿದ್ದಾರೆ.

loading...