ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ

0
0
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ತಾಲೂಕಿನ ಕ್ರಿಕೆಟ್‌ ಪ್ರೇಮಿಗಳ ಪ್ರೋತ್ಸಾಹದಿಂದ ಪ್ರತಿ ವರ್ಷವೂ ಕ್ರಿಕೆಟ್‌ ಪಂದ್ಯಾವಳಿಯನ್ನು ನಡೆಸುತ್ತಾ ಬಂದಿದ್ದೇವೆ. ಮುಂದೆಯೂ ಕೂಡ ತಮ್ಮ ಸಹಾಯ ಸಹಕಾರ ಅತ್ಯವಶ್ಯ ಎಂದು ಮುಂಡಗೋಡ ಚಾಂಪಿಯನ್ಸ ಲೀಗ್‌ನ ವ್ಯವಸ್ಥಾಪಕ ಪ್ರಕಾಶ ಚಂದಾಪುರ ಹೇಳಿದರು.
ಬುಧವಾರ ತಾಲೂಕಾ ಕ್ರೀಡಾಂಗಣದಲ್ಲಿ ಮುಂಡಗೋಡ ಚಾಂಪಿಯನ್ಸ ಲೀಗ್‌ನ ವತಿಯಿಂದ ಜರುಗಿದ 2019ರ 6ನೇ ಆವೃತ್ತಿಯ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಹಿರಿಯ ಆಟಗಾರ ವೃಷಭರಾಜ ಅಂಗಡಿ ಮಾತನಾಡಿ ಕ್ರಿಕೆಟ್‌ ಅಲ್ಲದೇ ಇನ್ನಿತರ ಕ್ರೀಡೆಗಳ ಆಟಗಾರರಿಗೆ ಪ್ರೋತ್ಸಾಹ ನೀಡಬೇಕು. ಆಟ ಆಡುವಾಗ ಕ್ರೀಡಾ ಮನೋಭಾವದಿಂದ ಆಡಬೇಕು. ನಿರ್ಣಾಯಕರು ನೀಡಿದ ತೀರ್ಮಾನಕ್ಕೆ ತಲೆಬಾಗಬೇಕು ಎಂದರು. ಮತ್ತೊಬ್ಬ ಹಿರಿಯ ಆಟಗಾರ ನಾರಾಯಣ ಭಟ್‌ ಮಾತನಾಡಿ ಈ ರೀತಿಯ ಪಂದ್ಯಾವಳಿಗಳು ಜರುಗುವುದರಿಂದ ತಾಲೂಕಿನಲ್ಲಿ ಕ್ರೀಡೆಗಳಿಗೆ ಇನ್ನೂ ಹೆಚ್ಚು ಆಸಕ್ತಿ ಬೆಳೆಯುತ್ತದೆ. ಇಂದಿನ ದಿನಗಳಲ್ಲಿ ಕ್ರೀಡಾಪಟುಗಳಿಗೆ ಎಲ್ಲ ರೀತಿಯ ಕ್ರೀಡಾ ಸಾಮಗ್ರಿಗಳ ವ್ಯವಸ್ಥೆ ಇದ್ದು ನಾವೆಲ್ಲ ಆಡುವಾಗ ಅವು ಇರಲಿಲ್ಲ. ಕ್ರೀಡೆಗಳನ್ನು ಉಳಿಸಿ ಬೆಳೆಸಿ ಎಂದು ಕರೆ ನೀಡಿದರು.
ಈ ವೇಳೆ ಹಿರಿಯ ಆಟಗಾರರಾದ ಲಕ್ಷ್ಮಣ ಬಾನಸೊಡೆ, ಹರ್ಷ ಬೆಂದ್ರಾಳ, ವೆಂಕಟೇಶ ದೈವಜ್ಞ, ಕೇಶವ ರಾಣಗೇರ, ಹಾಲೇಶ ಸುಣಗಾರ, ಬಾಪುಗೌಡ ಪಾಟೀಲ, ಸುನೀಲ ಬೈಲೂರ, ವಿಕಾಸ ನಾಯ್ಕ, ಪ್ರಶಾಂತ ಲಾಡ, ದೇವರಾಜ ಅಂಗಡಿ ಇತರರಿದ್ದರು. ತುಕಾರಾಮ ತಟ್ಟಿಹಳ್ಳಿ ನಿರೂಪಿಸಿದರು.

loading...