ಧರೆಗೆಉರುಳಿದ ಮರ; ತಪ್ಪಿದ ಬಾರಿ ಅನಾಹುತ

0
0
loading...

ಕನ್ನಡಮ್ಮ ಸುದ್ದಿ- ಬೆಳಗಾವಿ: ಬೆಳಗಾವಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಶನಿವಾರ ಸು.12ಗಂಟೆ ಸುಮಾರಿಗೆ ಬೃಹತ್‌ಕಾರದ ಅತೀ ಹಳೆಯದಾದ ಆಲದ ಮರ ನೆಲಕ್ಕೆ ಉರುಳಿದ್ದು, ಕುದಲೆ ಅಂತರದಲ್ಲಿ ಅನಾಹುತ್ ತಪ್ಪಿದೆ.
ಜೈ ಭೀಮ ಆಟೋ ನಿಲ್ದಾಣದ ಪಕ್ಕದಲ್ಲಿ ಇದ್ದ ಹಳೆಯದಾದ ಆಲದ ಮರ ಉರುಳಿದೆ.
ಇನ್ನೂ ಮರ ರಸ್ತೆಗೆ ವಾಲದೆ ಜಿಲ್ಲಾಸ್ಪತ್ರೆಯ ಆವರಣದ ಒಳಗೆ ಬಿದ್ದಿರುವ ಕಾರಣ ಹಾಗು ಮರದ ಕೆಳಗೆ ಇದ್ದ ಟೀ ಸ್ಟಾಲ್ ನಲ್ಲಿ ನಿಂತ ಸಾರ್ವಜನಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜಿಲ್ಲಾಸ್ಪತ್ರೆಯ ತಡೆಗೊಡೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ನಿಲ್ಲಿಸಿದ ಆ್ಯಂಬುಲೆನ್ಸ್ ಹಾನಿಯಾಗಿದ್ದು, ವಿಷಯ ತಿಳಿದ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ವಿದ್ಯುತ್ ತಂತಿಯನ್ನು ಸ್ಥಗಿತಗೊಳಿಸಿದ್ದಾರೆ‌. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಅಗಮಿಸಿಲ್ಲ.

loading...