ನೀರು ಸರಬರಾಜು ಯೋಜನೆ ಕಾಮಗಾರಿಗೆ ಚಾಲನೆ

0
2
loading...

ಕನ್ನಡಮ್ಮ ಸುದ್ದಿ-ಸವಣೂರ: ಜಿಲ್ಲಾ ಪಂಚಾಯತ ಹಾವೇರಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ 2018-19ನೇ ಸಾಲಿನ ಎನ್‍ಆರ್‍ಡಿಡಬ್ಲೂಪಿ ಯೋಜನೆ ಅಡಿಯಲ್ಲಿ ಸುಮಾರು 5 ಲಕ್ಷ ರೂಗಳ ಅನುದಾನದಲ್ಲಿ ಕೈಗೊಳ್ಳುತ್ತಿರುವ ಸವಣೂರ ತಾಲೂಕಿನ ಕಳಸೂರ ಗ್ರಾಮಕ್ಕೆ ನಲ್ಲಿ ನೀರು ಸರಬರಾಜು ಯೋಜನೆ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಹುರಳಿಕುಪ್ಪಿ ಜಿ.ಪಂ. ಕ್ಷೇತ್ರದ ಸದಸ್ಯೆ ಸಹನಾ ಶ್ರೀಧರ ದೊಡ್ಡಮನಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಶ್ರೀಕಾಂತಗೌಡ ಪಾಟೀಲ, ಉಪಾಧ್ಯಕ್ಷ ಗುಡ್ಡಪ್ಪ ಕರೆಮ್ಮನವರ, ಗ್ರಾಮ ಪಂ.ಸದಸ್ಯರಾದ ಪುಟ್ಟಪ್ಪ ಮರಗಿ, ರಾಜು ಬಂಕಾಪೂರ, ಫಕ್ಕೀರೇಶ ಕರಿಯನ್ನವರ, ರೂಪಾ ಜಕ್ಕಣ್ಣನವರ, ಮುಂಖಡರಾದ ಎಸ್.ಎಚ್.ಪಾಟೀಲ, ಶ್ರೀಕಾಂತಪ್ಪ ಬನ್ನಿಕೊಪ್ಪ, ಜನಕರಾಜ ಬನ್ನಿಕೊಪ್ಪ, ಸಹಾಯಕ ಅಭಿಯಂತರ ಪ್ರವೀಣ ಬಿರಾದಾರ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಶಂಭಲಿಂಗ ನಾಡರ ಸೇರಿದಂತೆ ಗ್ರಾಮದ ಹಿರಿಯರು ಇದ್ದರು.

loading...