ಪ್ರಣಾಳಿಕೆಗಾಗಿ ಸಾರ್ವಜನಿಕ ಅಭಿಪ್ರಾಯಕ್ಕೆ ಬಿಜೆಪಿಯಿಂದ 15 ಉಪ ಸಮಿತಿಗಳ ರಚನೆ

0
0
loading...

ನವದೆಹಲಿ:- ಪ್ರತಿಪಕ್ಷಗಳು ಒಡ್ಡಿರುವ ಪ್ರಮುಖ ಸವಾಲುಗಳನ್ನು ಎದುರಿಸಲು 2019 ಲೋಕಸಭಾ ಚುನಾವಣೆಯ ಪ್ರಣಾಳಿಕೆ(ಸಂಕಲ್ಪ ಪತ್ರ)ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ 15 ಉಪ ಸಮಿತಿಗಳನ್ನು ರಚಿಸಲು ಬಿಜೆಪಿ ನಿರ್ಧರಿಸಿದೆ.
ರಾಜಧಾನಿಯಲ್ಲಿಂದು ಪಕ್ಷದ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಣಾಳಿಕೆ ಸಮಿತಿ ಅಧ್ಯಕ್ಷ ರಾಜನಾಥ್‍ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜನಾಥ್‍ ಸಿಂಗ್‍ ಅವರು, ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಸಾಧಿಸಲು ವಿವಿಧ ವಲಯಗಳ ಭಾಗೀದಾರರು ಉಪ ಸಮತಿಗಳಲ್ಲಿ ಒಳಗೊಂಡಿರುತ್ತಾರೆ ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‍, ತಾವರ್ ಚಂದ್‍ ಗೆಹ್ಲೋಟ್‍, ರವಿಶಂಕರ್ ಪ್ರಸಾದ್‍, ಪಿಯೂಷ್‍ ಗೋಯಲ್‍, ಮುಖ್ತಾರ್ ಅಬ್ಬಾಸ್‍ ನಖ್ವಿ, ಕೆ.ಜೆ.ಅಲ್ಫೋನ್ಸ್ ಮತ್ತು ಕಿರಣ್‍ ರಿಜಿಜು ಸಭೆಯಲ್ಲಿ ಉಪಸ್ಥಿತರಿದ್ದರು.

ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್‍ ಸಿಂಗ್ ಚೌಹಾಣ್, ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್‍ ಕುಮಾರ್ ಮೋದಿ, ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್‍ ಪ್ರಸಾದ್‍ ಮೌರ್ಯ ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು.
ಲೋಕಸಭಾ ಚುನಾವಣೆಗೆ ಅರುಣ್‍ ಜೇಟ್ಲಿ ನೇತೃತ್ವದ ಪ್ರಚಾರ ಸಮಿತಿ, ರವಿಶಂಕರ್ ಪ್ರಸಾದ್‍ ನೇತೃತ್ವದಲ್ಲಿ ಮಾಧ್ಯಮ ಸಮಿತಿ ಸೇರಿದಂತೆ ಹಲವು ಸಮಿತಿಗಳನ್ನು ಪಕ್ಷದ ಅಧ್ಯಕ್ಷ ಅಮಿತ್ ಶಾ ರಚಿಸಿದ್ದಾರೆ

loading...