ಪ್ರಯಾಗರಾಜ್: ಕುಂಭ ಮೇಳದಲ್ಲಿ ಬೆಂಕಿ ಅವಘಡ

0
0
loading...

ಪ್ರಯಾಗರಾಜ್:- ಮಹಾ ಸಂಕ್ರಾಂತಿ ನಿಮಿತ್ತ ಒಂದು ತಿಂಗಳವರೆಗೆ ನಡೆಯುವ ಕುಂಭಮೇಳ ವೇಳೆ ಇಲ್ಲಿನ ದಿಗಂಬರ್ ಅಖಾಡಾ ಸೆಕ್ಟರ್ 16ರಲ್ಲಿ ಬೆಂಕಿ ಅವಘಡ ಸಂಭವಿಸಿ ಸಾಧು -ಸಂತರು ತಮ್ಮ ಗೂಡಾರಗಳನ್ನು ಬಿಟ್ಟು ಹೊರ ಓಡಿಬಂದ ಘಟನೆ ನಡೆದಿದೆ.
ಅಡುಗೆ ಮಾಡುವ ವೇಳೆ ಅನಿಲ ಸೋರಿಕೆ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 8ಕ್ಕೂ ಹೆಚ್ಚು ಗೂಡಾರಗಳು ಸುಟ್ಟು ಭಸ್ಮವಾಗಿವೆ. ಆದರೆ, ಯಾವುದೇ ಸಾವು ನೋವು ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸ್‍ ವರಿಷ್ಠಾಧಿಕಾರಿ ಕೆ.ಪಿ.ಸಿಂಗ್ ಹೇಳಿದ್ದಾರೆ.
ಟೆಂಟ್ ಗಳಿಗೆ ಬೆಂಕಿ ತಗಲುತ್ತಲೇ ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯಿಂದ ಎರಡು ಅನಿಲ ಸಿಲಿಂಡರ್ ಗಳು ಸ್ಫೋಟಗೊಂಡಿದ್ದು, ದಿಗಂಬರ್ ಅಖಾಡಾದಲ್ಲಿದ್ದ ಸಾಧು ಹಾಗು ಸಂತರು ಓಡಿ ಹೊರಬಂದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಕುರಿತು ತನಿಖೆ ಮುಂದುವರಿದಿದ್ದು, ಇಂತಹ ಘಟನೆಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಾಧುಗಳಿಗೆ ಮಾಹಿತಿ ನೀಡಲಾಗಿದೆ ಎಂದು ಡಿಜಿಪಿ ಒ.ಪಿ.ಸಿಂಗ್ ಹೇಳಿದ್ದಾರೆ

loading...