ಫೆ.5ರಿಂದ ಬೆಳಗಾವಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಸ್ಟಾರ್ ಏರ್ ಲೈನ್ಸ್ ಹಾರಾಟ

0
0
loading...

ಕನ್ನಡಮ್ಮ ಸುದ್ದಿ- ಬೆಳಗಾವಿ : ಘೋಡಾವತ್ ಮಾಲಿಕತ್ವದ ಸ್ಟಾರ್ ಏರ್ ಲೈನ್ಸ್ ಫೆ.5 ರಿಂದ ಬೆಳಗಾವಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನ ಹಾರಾಟ ಆರಂಭಿಸಲಿದೆ. ಈ ಸಂಬಂಧ ತನ್ನ ವೇಬ್ ಸೈಟ್ ನಲ್ಲಿ ಮಾಹಿತಿ ಹಾಕಿದ್ದು, ಬುಕ್ಕಿಂಗ್ ಆರಂಭಿಸಿದೆ.

ಸ್ಟಾರ್ ಏರ್ ಲೈನ್ಸ್ ಹುಬ್ಬಳ್ಳಿಯಿಂದ ಬೆಂಗಳೂರು ಮತ್ತು ತಿರುಪತಿಗೆ ವಿಮಾನ ಆರಂಭಿಸುವುದಾಗಿ ಈ ಹಿಂದೆ ಪ್ರಕಟಿಸಿತ್ತು. ಬೆಳಗಾವಿ ಪ್ರಸ್ತಾಪವಿರಲಿಲ್ಲ. ಆದರೆ ಇದೀಗ ಬೆಳಗಾವಿಯಿಂದ ಫೆ.5ರಿಂದ ವಿಮಾನ ಆರಂಭಿಸುವ ಪ್ರಕಟಣೆ ಹೊರಡಿಸಿದೆ. ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರ ಮಧ್ಯಾಹ್ನ 1.25 ಕ್ಕೆ ಬೆಂಗಳೂರಿನಿಂದ ಹೊರಟು 2.30ಕ್ಕೆ ಬೆಳಗಾವಿ ತಲುಪಲಿದೆ. ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯಿಂದ ಹೊರಟು 4.05ಕ್ಕೆ ಬೆಂಗಳೂರು ತಲುಪಲಿದೆ.

ಮಂಗಳವಾರ ಮಾತ್ರ ಸಂಜೆ 4.30 ಕ್ಕೆ ಬೆಂಗಳೂರಿನಿಂದ ಹೊರಟು 5.35ಕ್ಕೆ ಬೆಳಗಾವಿ ತಲುಪಲಿದ್ದು, ಸಂಜೆ 6 ಗಂಟೆಗೆ ಬೆಳಗಾವಿಯಿಂದ ಹೊರಟು 7.05ಕ್ಕೆ ಬೆಂಗಳೂರು ತಲುಪಲಿದೆ.

loading...