ಬಸವ, ಬುದ್ಧ, ವಿವೇಕಾನಂದರ ತತ್ವದ ಸಾರವು ಒಂದೇ :ಈಶ್ವರ ಮಮದಾಪೂರ

0
0
loading...

ಬಸವ, ಬುದ್ಧ, ವಿವೇಕಾನಂದರ ತತ್ವದ ಸಾರವು ಒಂದೇ :ಈಶ್ವರ ಮಮದಾಪೂರ

ಕನ್ನಡಮ್ಮ ಸುದ್ದಿ-ಗೋಕಾಕ :ಶರಣ ಸಂಸ್ಕೃತಿಯ ಹರಿಕಾರ ವಿಶ್ವಗುರು ಬಸವಣ್ಣನವರು ದಯವೇ ಧರ್ಮದ ಮೂಲವೆಂದರಿತು, ಶಾಂತಿ ಸಂದೇಶ ಸಾರಿದರು. ಆಸೆಯೇ ದುಃಖಕ್ಕೆ ಕಾರಣವೆಂದರಿತ ಗೌತಮ ಬುದ್ಧ ಧ್ಯಾನ ಯೋಗದಿಂದ ಶಾಂತಿಯನ್ನು ಅರಸಿದರು. ಹಿಂದು ಧರ್ಮದ ಖ್ಯಾತಿಯನ್ನು ವಿಶ್ವದಾದ್ಯಂತ ಪಸರಿಸಿದ ಸ್ವಾಮಿ ವಿವೇಕಾನಂದರು ಮಾನವೀಯ ಮೌಲ್ಯವನ್ನು ಮೆರೆದರು. ಬಸವ, ಬುದ್ಧ, ವಿವೇಕಾನಂದರ ತತ್ವದ ಸಾರವು ಒಂದೇ ಎಂದು ಹಿರಿಯ ಚುಟುಕು ಸಾಹಿತಿ, ಶಿಕ್ಷಕ ಈಶ್ವರ ಮಮದಾಪೂರ ಅವರು ಅಭಿಪ್ರಾಯಿಸಿದರು.
ಸರ್ವೇಶ್ವರ ಜಾನಪದ ಕಲಾಬಳಗ, ಗೋಕಾಕ ತಾಲ್ಲೂಕಾ ಲೇಖಕಿಯರ ವತಿಯಿಂದ ಆಯೋಜಿಸಲಾಗಿದ್ದ.
ದಂಡಗಿಯವರ ‘ನಿಸರ್ಗ’ ನಿಲಯದಲ್ಲಿ ಆಯೋಜಿಸಿದ ೨೬೮ನೇ ಸಾಹಿತ್ಯ ಚಿಂತನ ಕಮ್ಮಟದಲ್ಲಿ ‘ಸ್ಥಾವರ-ಜಂಗಮ’ದ ಪರಿಕಲ್ಪನೆ ಕುರಿತು ಉಪನ್ಯಾಸವನ್ನು ನೀಡಿದ ಮಮದಾಪೂರ ಅವರು ಮುಂದುವರೆದು ಮಾತನಾಡುತ್ತ ಬಸವಣ್ಣನವರು ಸ್ಥಾವರ ಪೂಜೆ, ಪುನಸ್ಕಾರಗಳ ನೆಪದಲ್ಲಿ ಶ್ರಿÃ ಸಾಮಾನ್ಯರಿಗೆ ಶೋಷಣೆಯಾಗಬಾರದೆಂಬ ಪರಿಕಲ್ಪನೆಯಲ್ಲಿ ಜಂಗಮ ಸ್ವರೂಪಿ ಇಷ್ಟಲಿಂಗದ ಪರಿಕಲ್ಪನೆಯನ್ನು ಬೆಳಕಿಗೆ ತಂದರು. ವಾಸ್ತವದಲ್ಲಿ ಬಸವಾದಿ ಶರಣರ ವಚನಗಳು ಅನುಷ್ಠಾನದಲ್ಲಿ ಬರುವ ಅಗತ್ಯವಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ೧೫೭ನೇ ಜಯಂತಿಯನ್ನು ಆಚರಿಸಲಾಯಿತು. ಜಾನಪದ ರಂಗಭೂಮಿ ಕಲಾವಿದ ಈಶ್ವರಚಂದ್ರ ಬೆಟಗೇರಿಯವರು ವಿವೇಕಾನಂದರ ತತ್ವ ಸಂದೇಶವನ್ನು ತಮ್ಮ ಏಕಪಾತ್ರಾಭಿನಯದ ಮೂಲಕ ಪ್ರದರ್ಶಿಸಿದರು. ಇತ್ತಿÃಚೆಗೆ ಕಾಶ್ಮಿÃರದಲ್ಲಿ ಆಯೋಜಿತವಾದ ಹಿಂದಿ ಭಾಷಾ ಕಾಶ್ಮಿÃರ ಸಂಗಮ ಅಂತರಾಷ್ಟಿçÃಯ ಸಂಗೋಷ್ಟಿ ಶ್ರಿÃನಗರ ಕಾಶ್ಮಿÃರದಲ್ಲಿ ಆಚಾರ್ಯ ಅಭಿನಂದ ಶಾರದಾ ಸಾಹಿತ್ಯ ಸನ್ಮಾನ ಪುರಸ್ಕೃತ ಶ್ರಿÃಮತಿ ಶಕುಂತಲಾ ದಂಡಗಿ, ಬೆಂಗಳೂರಿನಲ್ಲಿ ಸಿರಿಗನ್ನಡ ಕಲಾರತ್ನ ಪ್ರಶಸ್ತಿ ಪುರಸ್ಕೃತ ಕುಮಾರ ಪ್ರಥಮೇಶ ಗಣೇಶ ವಾಗ್ಮೊÃಡೆ, ಮೈಸೂರಿನಲ್ಲಿ ತಮ್ಮ ಪ್ರಥಮ ಚುಟುಕು ಪುಸ್ತಕ ಪ್ರಕಾಶಿಸಿದ ಶ್ರಿà ಈಶ್ವರ ಮಮದಾಪೂರ ಹಾಗೂ ಹಿರಿಯ ನ್ಯಾಯವಾದಿಗಳಾದಂಥ ವ್ಹಿ.ಪಿ. ಪಾಟೀಲ ಮುಂತಾದವರನ್ನು ಸನ್ಮಾನಿಸಲಾಯಿತು.

loading...