ಬಿಆರ್‌ಡಿಎಸ್ ಗ್ರಾಹಕರಿಗೆ ವಿಶೇಷ ದರದ ಪ್ಯಾಕೇಜ್: ನಾಗೇಶ

0
1
loading...

ಬಿಆರ್‌ಡಿಎಸ್ ಗ್ರಾಹಕರಿಗೆ ವಿಶೇಷ ದರದ ಪ್ಯಾಕೇಜ್: ನಾಗೇಶ
ಕನ್ನಡಮ್ಮ ಸುದ್ದಿ-ಬೆಳಗಾವಿ: ಪೆ.೧ರಿಂದ ದೇಶ್ಯಾದ್ಯಂತ ಕೇಬಲ ಚಾನಲ್ ಸೇವೆ ಸ್ಥಗಿತಗೊಳ್ಳಲಿದ್ದು, ಆಯ್ಕೆ ಮೂಲಕ ಚಾನಲ್ ನೋಡಿಕೊಳ್ಳಬಹುದಾಗಿದೆ. ಹೊಸ ನೀತಿ ಜಾರಿಗೆ ಬರುತ್ತಿರುವುದರಿಂದ ಗ್ರಾಹಕರಿಗಾಗಿ ಬಿಆರ್‌ಡಿಎಸ್ ಸಂಸ್ಥೆ ವಿಶೇಷ ದರದ ಪ್ಯಾಕೇಜ್ ರೂಪಿಸಿದೆ ಎಂದು ಬಿ,ಆರ್,ಡಿ,ಎಸ್, ಎಂಡಿ ನಾಗೇಶ ಚಾಬರಿಯಾ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಆರ್‌ಎಐ ಪ್ರಾಧಿಕಾರ ಡಿಸೆಂಬರ್ ೨೯ ರಂದು ದೇಶ್ಯಾದ್ಯಂತ ಹೊಸ ನೀತಿಯನ್ನು ಜಾರಿಗೆ ತರಬೇಕೆಂದು ಆದೇಶ ನೀಡಿತ್ತು. ಹಾಗೂ ಹಂತ ಹಂತವಾಗಿ ಅನುಷ್ಠಾನಕ್ಕೆ ತರಬೇಕೆಂದು ಹೇಳಿತ್ತು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟಿಆರ್‌ಎಐ ಪ್ರಾಧಿಕಾರ ನೀಡಿರುವ ಆದೇಶ ಆರು ತಿಂಗಳವರೆಗೆ ಮುಂದೊಡಿಸಲಾಗಿದೆ ಎಂಬ ಸಂದೇಶ ಹರಿಬಿಟ್ಟು ಗೊಂದಲ ಸೃಷ್ಟಿಸಲಾಗಿತ್ತು. ಆದರೆ ಟಿಆರ್‌ಎಐ ಪ್ರಾಧಿಕಾರ ಪೆ.೧ ರಂದು ಈ ಹೊಸ ನೀತಿ ದೇಶ್ಯಾದ್ಯಂತ ಜಾರಿಗೆ ತರಬೇಕೆಂದು ಅಧಿಕೃತವಾಗಿ ಆದೇಶ ನೀಡಿದೆ. ಆದ್ದರಿಂದ ಬಿ,ಆರ್,ಡಿ,ಎಸ್ ಸಂಸ್ಥೆ ಈ ಆದೇಶದನ್ವಯ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಹಾಗೂ ಕಳೆದ ೨೦ ವರ್ಷಗಳಿಂದ ಬಿ,ಆರ್,ಡಿ,ಎಸ್ ಸಂಸ್ಥೆಯೊಂದಿಗೆ ಸ್ನೇಹ ಹೊಂದಿದ ವೀಕ್ಷಕರಿಗೆ ಯಾವುದೇ ಗೊಂದಲ ಆಗದೆ ಇರುವ ಹಾಗೆ ಕೆಲ ಪ್ಯಾಕೇಜಗಳನ್ನು ಇಂದಿನಿಂದ ಜಾರಿಗೆ ತರಲಾಗಿದೆ ಎಂದರು. ಹಾಗೂ ಕಳೆದ ೨೦ ವರ್ಷಗಳಿಂದ ಕೇಬಲ್ ಚಾನಲ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಬಿ,ಆರ್,ಡಿ,ಎಸ್ ಕರ್ನಾಟಕ, ಗೋವಾ,ಮತ್ತು ಮಹಾರಾಷ್ಟ್ರ ಮೂರು ರಾಜ್ಯಗಳಲ್ಲಿ ಇರುವ ಎಲ್ಲ ಭಾಷೆಯ ವೀಕ್ಷಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಜನರ ಇಚ್ಛೆಯಂತೆ ಕಡಿಮೆ ದರದಲ್ಲಿ ವಿಶೇಷ ಪ್ಯಾಕೇಜಗಳನ್ನು ನೀಡಲು ತಯಾರಿ ಮಾಡಿಕೊಂಡಿದೆ ಎಂದರು. ಈ ಸಂದರ್ಭದಲ್ಲಿ ರಾಜಶೇಖರ ಪಾಟೀಲ ಉಪಸ್ಥಿತರಿದ್ದರು.

loading...