ಮಂಗನ ಕಾಯಿಲೆಯಿಂದ ಮಾರಣ ಹೋಮ .೬ ಜೀವ ಬಲಿ

0
0
loading...

 

 

ಕನ್ನಡಮ್ಮ ಸುದ್ದಿ:ಶಿವಮೊಗ್ಗ:-

ಮಾರಿಯಾಗಿ ಪರಿಣಮಿಸಿದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಮಂಗನಕಾಯಿಲೆ ತೀವ್ರವಾಗಿ ಹರಡುತ್ತಿದ್ದು, ಸಾವಿಗೀಡಾದವರ ಸಂಖ್ಯೆ 6ಕ್ಕೆ ಏರಿದೆ.

ಸಾಗರ ತಾಲೂಕಿನಲ್ಲಿ 6 ಜನರು ಮಂಗನಕಾಯಿಲೆಗೆ (ಕ್ಯಾಸನೂರು ಕಾಯಿಲೆ) ಬಲಿಯಾಗಿದ್ದಾರೆ.ಸ್ಥಳಿಯರು ಆತಂಕದಲ್ಲಿದ್ದಾರೆ .ಸಾಗರ ತಾಲೂಕಿನ ಅರಳಗೋಡು ಗ್ರಾಮದ 18 ವರ್ಷದ ಯುವತಿ ಶ್ವೇತಾ (18) ಮಂಗನಕಾಯಿಲೆಯಿಂದ ಮೃತಪಟ್ಟಿದ್ದಾರೆ. ಶಿವಮೊಗ್ಗದ ಆಸ್ಪತ್ರೆಯಲ್ಲಿ ಶ್ವೇತಾ ಚಿಕಿತ್ಸೆ ಪಡೆಯುತ್ತಿದ್ದರು.  ಸಾಗರದ ಅರಳಗೋಡು ಗ್ರಾಮದಲ್ಲಿ ಪಾರ್ಶ್ವನಾಥ ಜೈನ್, ವಾಟೆಮಕ್ಕಿಯ ಕೃಷ್ಣಪ್ಪ, ಮಂಜುನಾಥ್, ಲೋಕರಾಜ್ ಜೈನ್, ರಾಮವ್ವ ಮೃತಪಟ್ಟಿದ್ದಾರೆ. ಸುತ್ತಮುತ್ತ 25ಕ್ಕೂ ಹೆಚ್ಚು ಮಂಗಗಳು ಮೃತಪಟ್ಟಿರುವ  ಮಾಹಿತಿ  ತಿಳಿದು ಬಂದಿದೆ.

ದಶಕಗಳಿಂದ ಕಾಡುತ್ತಿರುವ ಮಂಗನ ಕಾಯಿಲೆ ಕಳೆದ 2 ದಶಗಳಿಂದ ನಿಯಂತ್ರಣಕ್ಕೆ ಬಂದಿತ್ತು. ಹಾಗಾಗಿ ಲಸಿಕೆ ನಿರ್ಲಕ್ಷಿಸಲಾಗಿತ್ತು. ಸರಿಯಾಗಿ ಲಸಿಕೆ ಹಾಕದಿರುವುದು ಮತ್ತು ರೋಗ ದೃಢಪಡಲು ವಿಳಂಬವಾಗುತ್ತಿರುವುದು ಕಾಯಿಲೆ ತೀವ್ರತರವಾಗಿ ಹರಡಲು ಕಾರಣವಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು   ಇನ್ನಷ್ಟು ಸಾವು ಆಗದಂತೆ ನೋಡಿಕೊಳ್ಳುವ ಕ್ರಮವನ್ನು ಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯರು ಮನವಿಯನ್ನು ಮಾಡಿಕೊಂಡಿದ್ದಾರೆ .

loading...