ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ : ಸಂಗಮೇಶ ನಿರಾಣಿ

0
0
loading...

ಜಮಖಂಡಿ: ಪಾಲಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಪಾಲಕರು ಆಸ್ತಿಗಳನ್ನು ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ, ಮಕ್ಕಳ ಉಜ್ವಲ ಭವಿಷ್ಯ ನಿರ್ಮಿಸಬೇಕೆಂದು ಉದ್ಯಮಿ ಸಂಗಮೇಶ ನಿರಾಣಿ ಹೇಳಿದರು.
ತಾಲೂಕಿನ ಹುಲ್ಯಾಳ ಕ್ರಾಸ್‌ ಬಳಿಯ ಗುರುದೇವ ರಾನಡೆ ಶಿಕ್ಷಣ ಸಂಸ್ಥೆಯ ವಿದ್ಯಾಭವನ ಇಂಟರ್‌ ನ್ಯಾಶನಲ್‌ ಸಿಬಿಎಸ್‌ಸಿ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ನಡೆದ ವಿಜ್ಞಾನ ಹಾಗೂ ಕಲಾ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಪಠ್ಯಕ್ರಮಕ್ಕೆ ಅಂಟಿಕೊಳ್ಳದೇ ಪಠೇತರ ಚಟುವಡಿಕೆಗಳಲ್ಲಿ ಪಾಲ್ಗೊಂಡು, ತೊಡ ಗಬೇಕು.ಪ್ರತಿಯೊಬ್ಬರು ತಮ್ಮ ಪ್ರತಿ ಕೆಲಸಗಳಲ್ಲಿ ವಿಜ್ಞಾನ ಬಗ್ಗೆ ಜ್ಞಾನ ಹೊಂದಬೇಕು.
ವಿದ್ಯಾ ರ್ಥಿಗಳು ಹೆಚ್ಚೆಚ್ಚು ಅಧ್ಯಯನಶೀಲರಾಗಿ ಉತ್ತಮ ಶಿಕ್ಷಣವಂತರಾಗಬೇಕೆಂದು ಹೇಳಿದರು. ಅತಿಥಿಗಳಾಗಿದ್ದ ಜಿಪಂ ಪುಆಧ್ಯಕ್ಷ ಮುತ್ತಪ್ಪ ಕೋಮಾರ ಮಾತನಾಡಿ, ಇಂದು ಶಿಕ್ಷಣ ಸಂಸ್ಥೆ ಗಳು ಉತ್ತಮ ಗುಣಮಟ್ಟದ ಶಿಕ್ಞಣ ನೀಡುವ ಕಾರ್ಯ ಪ್ರಾಮಾಣಿಕವಾಗಿ ಮಾಡಬೇಕು. ಜಿಲ್ಲೆಗೆ ಈ ಶಿಕ್ಷಣ ಸಂಸ್ಥೆ ಮಾದರಿ ಶಿಕ್ಷಣಐಆಗಿ ಹೊರಹೊಮ್ಮಬೇಕು. ಎಂದು ಹೇಳಿದರು. ಕೊಣ್ಣೂರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೋಣ್ಣೂರು ಮಾತನಾಡಿ,ಶಿಕ್ಷಕ ರು ಇಂದು ಮಕ್ಕಳಿಗೆ ಪರಿಪೂರ್ಣ ಶಿಕ್ಷಣ ನೀಡುವ ಕೆಲಸ ಮಾಡಬೇಕು. ಮಕ್ಕಳು ಸಕಾರಾತ್ಮ ಕವಾಗಿ ಚಿಂತನೆ ನಡೆಸಿದರೆ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಾಗಿತ್ತದೆ ಎಂದು ಹೇಳಿದರು. ಶಿಕ್ಷಣ ಇಲಾಖೆ ಅಧಿಕಾರಿ ರವೀಂದ್ರ ಸಂಪಗಾವಿ, ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ ಅಪರಂಜಿ ಮಾತನಾಡಿದರು.
ಅಧ್ಯಕ್ಷತೆ ಪ್ರಸಾದ ಅಪ್ಟೆ ವಹಿಸಿದ್ದರು. ಲಕ್ಷ್ಮೀದೇವಿ ಅಪರಂಜಿ, ಕುಲ ದೀಪಿಕಾ ಅಪ್ಟೆ,ಮಹಾಂತೇಶ ಮೂಡಲಗಿ, ರಾಜಶೇಖರ ಕಾಮೋಜಿ, ಡಾ. ಉಮೇಶ ಮಹಾಬಳ ಶೆಟ್ಟಿ, ವಿರುಪಾಕ್ಷಯ್ಯಾ ಕಂಬಿ, ರುದ್ರಯ್ಯಾ ಕರಡಿ, ರಾಧೇಶಾಮ ಬುತಡಾ, ಶ್ವೇತಾ ಅಪರಂಜಿ, ಪ್ರಜ್ವಲ ನಿರಾಣಿ, ವೈಶಾಲಿ ನಿರಳೆ, ಪ್ರಾಚಾರ್ಯೆ ಅನು ಮುಲ್ಲಾ, ಶರಣು ಸಜ್ಜನ, ಸಾವಿತ್ರಿ ಕಕ್ಕೇ ರಿ, ವೆಂಕಟೇಶ ಹುಂಡೆಕಾರ, ಪ್ರೇಮಾನಂದ ಹಿರೇಮಠ, ನಾಗರತ್ನಾ ಹಿರೇಮಠ ಇದ್ದರು.

loading...