loading...

 

ಕನ್ನಡಮ್ಮ ಬೆಂಗಳೂರು : ಚುನಾವಣೆಯಲ್ಲಿ ಯಾವ ಪಕ್ಷವು ಬಹುಮತ ಪಡೆಯದೇ ಜೆಡಿಎಸ್ ಹಾಗೂ ಕಾಂಗ್ರೆಸ್ ಮಿತ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಲೋಕಸಭೆ ಹಾಗೂ ವಿಧಾನಸಭೆ ಉಪ ಚುನಾವಣೆಯಲ್ಲಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಕಣಕ್ಕಿಳಿದು ಯಶಸ್ಸು ಸಾಧಿಸಿವೆ .

ಇನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸರ್ಕಾರವನ್ನು ಮುಂದುವರಿಸಲು ಉಭಯ ಪಕ್ಷದ ನಾಯಕರು ಬಯಸಿದ್ದೆ ಆದರೂ ಸ್ಥಾನ ಹಂಚಿಕೆಯ ಕುರಿತಾಗಿ ಹಗ್ಗ – ಜಗ್ಗಾಟ ನಡೆದಿದೆ .ಇನ್ನು ಈ ಹಗ್ಗ ಜಗ್ಗಾಟದಲ್ಲಿ ಜೆಡಿಎಸ್ ೧೨ ಸ್ಥಾನಕ್ಕೆ ಬೇಡಿಕೆಯನ್ನು ಇಟ್ಟಿದ್ದು .ಇದಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ

ಇದರ ಮಧ್ಯೆ ದೋಸ್ತಿ ಸರಕಾರಕ್ಕೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ .ರಾಜ್ಯದ ೧೦೧ ನಗರ ಸ್ಥಳೀಯ ಸಂಸ್ಥೆಗಳ  ಚುನಾವಣೆಗೆ ಇದೇ ಫೆಬ್ರವರಿ ರಂದು ಹೊರಬೀಳವ ಸಾಧ್ಯತೆ ಇದೆ .ಫೆಬ್ರುವರಿ ಎರಡನೇ ಹಾಗೂ ಮೂರನೇ ವಾರದಲ್ಲಿ ಚುನಾವಣೆ ಘೋಷಣೆಯ ನಿರೀಕ್ಷೆ ಇದ್ದು .ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಹುತೇಕವಾಗಿ ಕಷ್ಟವಾದ ಕಾರಣ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಲೋಕಸಭಾ ಚುನಾವಣೆಗೂ ಮುನ್ನ ನಡೆಯುವ ಈ ಚುನಾವಣೆಗೆ ಯಾವ ರೀತಿಯ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ .

 

loading...