ಮೋದಿ ಸ್ವಾಗತಕ್ಕಾಗಿ ನೆಲಸಮಗೊಂಡ ಮರಗಳು

0
0
loading...

ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಅವರ ಒಡಿಶಾ ಭೇಟಿಗೂ ಎರಡು ದಿನ ಮುನ್ನ ನೂರಾರು ಮರಗಳು ಧರೆಗುರುಳಿದ್ದು, ಸ್ಥಳೀಯ ಆಡಳಿತದ ಕ್ರಮದ ವಿರುದ್ಧ ಸಾರ್ವಜನಿಕರು ತಿರುಗಿಬಿದ್ದಿದ್ದಾರೆ.

ಮೋದಿ ಅವರು ಒಡಿಶಾದ ಬಲಂಗಿರ್​ ಜಿಲ್ಲೆಗೆ ಮಂಗಳವಾರ ಭೇಟಿ ನೀಡಲಿದ್ದು, ಪ್ರಧಾನಿ ಹೆಲಿಕಾಪ್ಟರ್​ ಇಳಿಯುವ ತಾತ್ಕಾಲಿಕ ಹೆಲಿಪ್ಯಾಡ್​ ನಿರ್ಮಾಣ ಹಾಗೂ ಭದ್ರತೆ ದೃಷ್ಟಿಯಿಂದ ನೂರಾರು ಮರಗಳು ಧರೆಗುರುಳಿಸಲಾಗಿದೆ.ಈ ಸಂಬಂಧ ರೈಲ್ವೆ ಇಲಾಖೆಗೆ ಬಲಂಗಿರ್​ ಡಿಎಫ್​ಒ ನೋಟಿಸ್​ ನೀಡಿದ್ದು, ಮರಗಳನ್ನು ಕಡಿದಿದ್ದನ್ನು ಪ್ರಶ್ನಿಸಿದ್ದಾರೆ. ರೈಲ್ವೆ ಇಲಾಖೆ ಇದಕ್ಕೆ ಸ್ಪಷ್ಟನೆ ನೀಡಿದ್ದು, ಮರಗಳನ್ನು ಲೋಕೋಪಯೋಗಿ ಇಲಾಖೆ ಕಡಿದಿದೆ ಎಂದು ಹೇಳಿ ಜಾರಿಕೊಂಡಿದೆ.

ಒಡಿಶಾದಲ್ಲಿ ಮರ ಕಡಿಯುವ ವಿಚಾರ ರಾಜಕೀಯ ಬಣ್ಣ ಪಡೆದುಕೊಂಡಿದ್ದು ಇದೇ ಮೊದಲಲ್ಲ. ಕಳೆದ ನವೆಂಬರ್​ನಲ್ಲಿ ಬಿಯರ್​ ತಯಾರಿಕಾ ಘಟಕದ ಪ್ರಾರಂಭಕ್ಕಾಗಿ ಒಡಿಶಾದ ಧೆಂಕಲನ್​ನಲ್ಲಿ ನೂರಾರು ಮರಗಳನ್ನು ಕಡಿಯಲಾಗಿತ್ತು. ಇದು ಬಿಜೆಪಿ ಮತ್ತು ಕಾಂಗ್ರೆಸ್​ ಕಾರ್ಯಕರ್ತರ ನಡುವಿನ ವಾಗ್ಯುದ್ಧಕ್ಕೂ ಕಾರಣವಾಗಿತ್ತು. ಧೆಂಕಲನ್​ ಗ್ರಾಮದವರು ಮರಗಳನ್ನು ಅಪ್ಪಿಕೊಳ್ಳುವ ಮೂಲಕ ಕಡಿಯುವುದಕ್ಕೆ ಅಡ್ಡಿ ವ್ಯಕ್ತಪಡಿಸಿದ್ದರು.

loading...