ರಾಮ್ ರಹಿಮ್ ಅಪರಾಧಿ: ಕೋರ್ಟ್ ತೀರ್ಪು

0
0
loading...

ಪಂಚಕುಲ:  ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹತ್ಯೆ ಪ್ರಕರಣಕ್ಕೆ ಸಂಬಂಧ ಸ್ವಯಂಘೋಷಿತ ದೇವಮಾನವ ಗುರ್ಮಿತ್ ಕಾಮ್ ರಹೀಂ ಬಾಬಾ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದೆ. 

ಛತ್ರಪತಿ 2002ರಲ್ಲಿ ತಮ್ಮ ಪತ್ರಿಕೆಯಲ್ಲಿ ಪೂರಾ ಸಚ್ಚ ಎಂಬ ವರದಿ ಪ್ರಕಟಿಸಿದ್ದು ಅದರಲ್ಲಿ ಗುರ್ಮಿತ್ ಅವರು ಸಿರ್ಸಾದ ಡೇರಾ ಪ್ರಧಾನ ಕಚೇರಿಯಲ್ಲಿ ಮಹಿಳೆಯರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬ ಬಿತ್ತರಿಸಿದ್ದರು. ಈ ವರದಿ ಪ್ರಕಟವಾದ ಬೆನ್ನಲ್ಲೇ ಛತ್ರಪತಿ ಅವರನ್ನು ಗುಂಡಿಟ್ಟು ಕೊಲ್ಲಲಾಗಿತ್ತು. 

ವಿಚಾರಣೆ ವೇಳೆ ಆರೋಪ ಸಾಬೀತಾಗಿದ್ದರಿಂದ ಪಂಚಕುಲ ಸಿಬಿಐನ ವಿಶೇಷ ಕೋರ್ಟ್ ಗುರ್ಮಿತ್ ಸೇರಿದಂತೆ ನಾಲ್ವರು ದೋಷಿ ಎಂದು ತೀರ್ಪು ನೀಡಿದ್ದು ಅಪರಾಧಿಗಳಿಗೆ ಶಿಕ್ಷೆ ಪ್ರಮಾಣವನ್ನು ಜನವರಿ 17ರಂದು ಘೋಷಿಸಲಿದೆ.

loading...