ರಾಹುಲ್‌ಗೆ ಟಾಂಗ್ ನೀಡಿದ ಅಮಿತ್ ಶಾ

0
1
loading...

ನವದೆಹಲಿ: ನಾವು ರಾಮನಿರ್ಮಾಣ ಮಾಡಲು ಸಿದ್ಧ. ಸಂವಿಧಾನಾತ್ಮಕವಾಗಿಯೇ ರಾಮಮಂದಿರ ನಿರ್ಮಾಣ ಮಾಡಲು ಬಿಜೆಪಿ ಬದ್ಧವಾಗಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್​ ಶಾ ಘೋಷಣೆ ಮಾಡಿದ್ದಾರೆ.
ನವದೆಹಲಿ ರಾಮಲೀಲಾ ಮೈದಾನದಲ್ಲಿ ಆರಂಭಗೊಂಡ ಎರಡು ದಿನಗಳ ಬಿಜೆಪಿ ಸಮ್ಮೇಳನದಲ್ಲಿ ಮಾತನಾಡಿದ ಅವರು, ಬಾಬ್ರಿ ಮಸೀದಿ – ರಾಮಜನ್ಮಭೂಮಿ ವಿವಾದದ ವಿಚಾರಣೆಗೆ ಕಾಂಗ್ರೆಸ್​ ವಕೀಲ ಕಪಿಲ್​ ಸಿಬಲ್​ ಅಡ್ಡಿಯಾಗಿದ್ದಾರೆ. ರಾಮ ಮಂದಿರ, ಬಾಬ್ರಿ ಮಸೂದೆ ಪ್ರಕರಣದ ವಿಚಾರಣೆ ವಿಳಂಬಕ್ಕೆ ಕಾಂಗ್ರೆಸ್​​ ಕಾರಣ ಎಂದು ಕಿಡಿಕಾರಿದರು.
ವಿದೇಶಗಳಲ್ಲಿ ಭಾರತದ ಗೌರವ ಹೆಚ್ಚಿಸಲು ಪ್ರಧಾನಿ ಕಾರಣರಾಗಿದ್ದಾರೆ. ವಿದೇಶಕ್ಕೆ ಒಮ್ಮೆ ಹೋಗಿ ನೋಡಿ ಹೇಗಿದೆ ಭಾರತದ ಸ್ಥಿತಿ ಅಂತಾ ಗೊತ್ತಾಗುತ್ತೆ ಎಂದು ಬಣ್ಣಿಸಿದರು.
ವಿದೇಶಾಂಗ ನೀತಿಯಲ್ಲಿ ನಾವು ಸಕ್ಸಸ್​ ಆಗಿದ್ದೇವೆ. ಇದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿ ಅವರು ಕಾರಣ ಎಂದು ಗುಣಗಾಣ ಮಾಡಿದರು. ಭಾರತದ ಸಹಭಾಗಿತ್ವ ಇಲ್ಲದೇ ಅಂತಾರಾಷ್ಟ್ರೀಯ ನಾಯಕರು ಸಭೆಗಳನ್ನ ಮುಗಿಸುವುದಿಲ್ಲ. ಅಂತಾರಾಷ್ಟ್ರೀಯ ಆರ್ಥಿಕ ಹಿಂಜರಿತದ ನಡುವೆಯೂ ನಮ್ಮ ಜಿಡಿಪಿ ಹೆಚ್ಚಿದೆ. ಚೀನಾವನ್ನ ಹಿಂದಿಕ್ಕಿ ನಾವು ಮುನ್ನುಗುತ್ತಿದ್ದೇವೆ ಎಂದು ಹೇಳಿದರು.
ಸುಪ್ರೀಂಕೋರ್ಟ್​ನಲ್ಲಿ ನಿಮ್ಮ ಎಲ್ಲ ಎ, ಬಿ ಟೀಂಗಳನ್ನ ಕಳುಹಿಸಿದಿರಿ. ಆದರೆ ನಿಮ್ಮ ಎಲ್ಲ ಪ್ರಯತ್ನಗಳು ವಿಫಲವಾದವು. ರಾಹುಲ್​ ಆರೋಪಗಳಿಗೆ ರಕ್ಷಣಾ ಸಚಿವರು ಸುದೀರ್ಘ ಉತ್ತರ ಕೊಡುವ ಮೂಲಕ ದೇಶದ ಜನರಿಗೆ ಸ್ಫಷ್ಟ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್​​​ಗೆ ಸುಳ್ಳು ಹೇಳುವುದೇ ಕೆಲಸ. ನಿಮ್ಮ ಪೂರ್ಣ ಇತಿಹಾಸವೇ ಭ್ರಷ್ಟಾಚಾರದಿಂದ ಕೂಡಿದೆ ಎಂದರು.
ನೀರವ್​, ಚೋಕ್ಸಿ, ಮಲ್ಯ ಓಡಿ ಹೋಗಿದ್ದೇಕೆ? ನಿಮ್ಮ ಕಾಲದಲ್ಲಿ ಯಾಕೆ ಅವರೆಲ್ಲ ಓಡಿಹೋಗಲಿಲ್ಲ? ನೀವು ಉತ್ತರ ಕೊಡಿ ಎಂದು ಸವಾಲು ಹಾಕಿದರು. ಅವರೇಕೆ ಓಡಿಹೋದರೆಂದರೆ ಅವರೆಲ್ಲರಿಗೆ ಮೋದಿ ಭಯ ಇದೆ. ಬಾಕಿದಾರರನ್ನು ಚೌಕಿದಾರ ಹಿಡಿದು ತಂದು, ಪ್ರತಿ ಪೈಸೆ ವಸೂಲು ಮಾಡ್ತಾರೆ ಎಂದೂ ಹೇಳಿದರು

loading...