ಲಂಬಾಣಿ ಜನಾಂಗದ ಗುಳೆ ತಡೆಯುವಂತೆ ಕ್ರಮಕ್ಕೆ ಆಗ್ರಹ

0
1
loading...

ಲಂಬಾಣಿ ಜನಾಂಗದ ಗುಳೆ ತಡೆಯುವಂತೆ ಕ್ರಮಕ್ಕೆ ಆಗ್ರಹ

ಕನ್ನಡಮ್ಮ ಸುದ್ದಿ- ಬೆಳಗಾವಿ;ಬಂಜಾರ ವಲಸೆ ತಡೆಗಟ್ಟಲು ಸರ್ಕಾರ ಶಾಶ್ವತ ಪರಿಹಾರಕ್ಕಾಗಿ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ತಾಂಡಾ ರಕ್ಷಣಾ ವೇದಿಕೆಯ ವತಿಯಿಂದ ಗುರುವಾರ ಅಂಚೇ ಕಚೇರಿ ಮೂಲಕ ಮುಖ್ಯಮಂತ್ರಿ ಮನವಿ ಸಲ್ಲಿಸಿದರು.

ಲಂಬಾಣಿ ಜನಾಂಗ ಗುಳೆ ಹೊಗದಂತೆ ತಾಂಡಾಗಳ ಸಮಗ್ರ ಅಭಿವೃದ್ಧಿ ನೀತಿಯನ್ನು ಜಾರಿಗೊಳಿಸಿ,ಉದ್ಯೋಗ ಖಾತ್ರಿ ಯೋಜನೆಯಡಿ ವರ್ಷ ಪೂರ್ತಿ ಸ್ಥಳಿಯ ಕೆಲಸ ಸಿಗುವಂತೆ, ತಾಂಡಾದ ಜನತೆಯ ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಘನತೆಯ ಬದುಕಿನಿಂದ ವಂಚಿತರಾಗದಂತೆ ಸೂಕ್ತ ಕ್ರಮ, ಸೇರಿದಂತೆ ವಿವಿಧ ಬೇಡಿಗಳಿಗೆ ಆಗ್ರಹಿಸಿ ಪ್ರತಿಭಟನೆ ಮೂಲಕ ಕೆಎಂಎಪ್ ಡೈರಿಯಿಂದ ಮಹಾಂತೇಶ ನಗರದ
ಅಂಚೇ ಕಚೇರಿಯವರೆಗೆ ರ್ಯಾಲಿ ನಡೆಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಪ್ರದಾನ ಕಾರ್ಯದರ್ಶಿ ಗಂಗಾಧರ ಲಮಾಣಿ,ಗೋಪಿ ರಾಠೋಡ ಲಕ್ಷ್ಮಣ ಲಮಾಣಿ,ಪಾಂಡು ಜಲಗೇರಿ, ಮನೋಹರ ಲಮಾಣಿ, ಹನುಮಂತ ಲಮಾಣಿ ಸೇರಿದಂತೆ ಆಟೋ ಚಾಲಕರು ಹಾಜರಿದ್ದರು.

loading...