ವಾಹನಗಳಿಗೆ ಬೆಂಕಿ ಯತ್ನಿಸುತ್ತಿದ ಇಬ್ಬರ ಬಂಧನ

0
0
loading...

ವಾಹನಗಳಿಗೆ ಬೆಂಕಿ ಯತ್ನಿಸುತ್ತಿದ ಇಬ್ಬರ ಬಂಧನ
ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದಲ್ಲಿ ವಾಹನಗಳಿಗೆ ಬೆಂಕಿ ಹಚ್ಚಲು ಯತ್ನಿಸುತ್ತಿದ್ದ ಇಬ್ಬರೂ ಆರೋಪಿಗಳನ್ನು ಮಾರ್ಕೇಟ್ ಪೊಲೀಸರು ಗುರುವಾರ ಕಾಮತ ಗಲ್ಲಿಯಲ್ಲಿ ಬಂಧಿಸಿದರು.
ಸಾರಾಯಿ ನಶೆಯಲ್ಲಿ ಕಂಡ ಕಂಡವರ ವಾಹನಗಳಿಗೆ ಬೆಂಕಿ ಹಚ್ಚುವ, ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡುತ್ತಾರೆ ಎಂದು ಕಾಮತ ಗಲ್ಲಿಯ ರಹವಾಸಿಗಳು ಸಹ ಇಂದು ಮಾರ್ಕೇಟ್ ಠಾಣೆ ಇನ್ಸಪೆಕ್ಟರ್ ವಿಜಯ ಮುರಗುಂಡಿ ಅವರಿಗೆ ದೂರು ಸಲ್ಲಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು. ತನಿಖೆ ನಡೆಸಿದ ಪೊಲೀಸರು ಉಜ್ವಲ್ ನಗರದ ಅತಾಶ ಅಬ್ದುಲಸತ್ತಾರ ಹವಾಲ್ದಾರ(೨೫) ಹಾಗೂ ಗಾಂಧಿನಗರದ ಅನೀಶ ಸಲೀಂಸಾಬ ಮಿರ್ಜಾಬಾಯಿ(೨೬) ಬಂಧಿತರು. ಪೊಲೀಸ್ ತನಿಖೆ ಮುಂದುವರೆದಿದೆ.

loading...