ವಿದ್ಯಾರ್ಥಿನಿಯರ ಸಾಧನೆಗೆ ಜಿಲ್ಲಾಧಿಕಾರಿ ಅಭಿನಂದನೆ

0
1
loading...

ಕನ್ನಡಮ್ಮ ಸುದ್ದಿ-ಕೊಪ್ಪಳ: ಇತ್ತೀಚಿಗೆ ಶಿರಸಿಯಲ್ಲಿ ಜರುಗಿದ 2018-19ನೇ ಸಾಲಿನ ರಾಜ್ಯ ಮಟ್ಟದ ವಿಶೇಷ ಚೇತನ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಕೊಪ್ಪಳ ಜಿಲ್ಲೆಯ ಇಂದರಗಿಯ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಕುಮಾರಿ ನಾಗಮ್ಮ ಒಂಟಿಗಾರ ಗುಂಡು ಎಸೆತದಲ್ಲಿ ಪ್ರಥಮ ಹಾಗೂ ಬರ್ಚಿ ಎಸೆತದಲ್ಲಿ ದ್ವಿತೀಯ ಸ್ಥಾನವನ್ನು ಹಾಗೂ ಹ್ಯಾಟಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಸವಿತಾ ಪಚ್ಚಿ ಬರ್ಚಿ ಎಸೆತದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ ತಮ್ಮ ಕಚೇರಿಯಲ್ಲಿ ಅಭಿನಂದಿಸಿ, ಇನ್ನೂ ಹೆಚ್ಚಿನ ಉತ್ತಮ ಸಾಧನೆ ಮಾಡುವುಂತೆ ಪ್ರೋತ್ಸಾಹಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಜಿ. ನಾಡಗೇರ, ಜಿ.ದೈ.ಶಿ ಅಧಿಕಾರಿ ಎ. ಬಸವರಾಜ, ದೈ.ಶಿ.ಸಂ.ಅಧ್ಯಕ್ಷ ವೀರಭದ್ರಯ್ಯ ಪೂಜಾರ ಹಾಗೂ ಎಸ್.ಬಿ ಮಣ್ಣೂರು ಇದ್ದರು.

loading...