ಶಾಲಾ ವಾಹನಕ್ಕೆ ಬೆಂಕಿ: 12 ಮಕ್ಕಳಿಗೆ ಗಾಯ

0
0
loading...

ಬದೂಯಿ:-ಜಿಲ್ಲೆಯ ಜಿಯಾನ್ಪುರ್ ಪ್ರದೇಶದಲ್ಲಿ ಶನಿವಾರ ಶಾಲಾ ವಾಹನಕ್ಕೆ ಬೆಂಕಿ ತಗಲಿ ಸಂಭವಿಸಿದ ದುರಂತದಲ್ಲಿ ಕಡೆ ಪಕ್ಷ 12 ಶಾಲಾ ಮಕ್ಕಳು ಗಾಯಗೊಂಡಿದ್ದಾರೆ.
ವಾಹನದಲ್ಲಿ ಆಕ್ರಮವಾಗಿ ಬಳಕೆ ಮಾಡುತ್ತಿದ್ದ ಸಿಲಿಂಡರ್ ಸ್ಫೋಟಗೊಂಡು ನಂತರ ವಾಹನಕ್ಕೆ ಬೆಂಕಿ ತಗುಲಿ ಅದು ಕೆಲವೇ ನಿಮಿಷದಲ್ಲಿ ಇಡೀ ವಾಹನನ್ನು ಆಕ್ರಮಿಸಿಕೊಂಡು ಬೆಂಕಿಯ ಚೆಂಡಿನಂತಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆಯ ನಂತರ ಶಾಲಾ ವಾಹನದ ಚಾಲಕ ಪರಾರಿಯಾಗಿದ್ದಾನೆ . ಗಾಯಗೊಂಡ ಮಕ್ಕಳನ್ನು ವಾರಾಣಸಿಯ ಆಸ್ಪತ್ರೆಗೆ ಸೇರಿಸಲಾಗಿದೆ. ಪೋಲಿಸರು ವಾಹನ ಮಾಲೀಕ ಹಾಗೂ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

loading...