ಸಂಕ್ರಾತಿ ನಂತರ ಕ್ರಾಂತಿಯಾದರೆಯಾಗಲಿ ನೋಡೊಣ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು : ಸಚಿವ ಜಾರಕಿಹೊಳಿ

0
0
loading...

ಸಂಕ್ರಾತಿ ನಂತರ ಕ್ರಾಂತಿಯಾದರೆಯಾಗಲಿ ನೋಡೊಣ

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು : ಸಚಿವ ಜಾರಕಿಹೊಳಿ

ಕನ್ನಡಮ್ಮ ಸುದ್ದಿ-ಬೆಳಗಾವಿ : ರಾಜ್ಯದ ರಾಜಕೀಯದಲ್ಲಿ ಬರುವ ಸಂಕ್ರಾತಿ ನಂತರ ಕ್ರಾಂತಿಯಾದರೆಯಾಗಲಿ ನೋಡೊಣ.ಜಿಲ್ಲೆಯ ಅಭಿವೃದ್ಧಿ ಬಗ್ಗೆ ಒತ್ತು ನೀಡಬೇಕಾಗಿದೆ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಶುಕ್ರವಾರ ಮಾದ್ಯಮದ ಜೊತೆ ಮಾತನಾಡಿದ ಅವರು ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೆ ದೊಡ್ಡ ಜಿಲ್ಲೆಯಾಗಿದ್ದು ಜಿಲ್ಲೆಯ ಅಭಿವೃದ್ಧಿ ಬಗ್ಗೆ ವಿವಿಧ ಇಲಾಖೆ ಬಗ್ಗೆ ಅಧಿಕಾರಿಗಳ ಸಭೆ ಮಾಡಬೇಕಾಗಿದೆ.ಈ ಮೂಲಕ ಜಿಲ್ಲೆಯ ಅಭಿವೃದ್ಧಿ ಮುಖ್ಯವಾಗಿದೆ ಎಂದರು.
ಇನ್ನು ಮಾಜಿ ಸಚಿವ ರಮೇಶ ಜಾರಕಿಹೊಳಿ ಮುನಿಸಿಕೊಂಡಿರುವ ಬಗ್ಗೆ ಪ್ರತಿಕ್ರಿÃಯೆ ನೀಡಿದ ಅವರು ಪಕ್ಷದ ಅಧ್ಯಕ್ಷರಾದ ದಿನೇಶ ಗೂಂಡುರಾವ್ ಹೇಳಿದ್ದಾರೆ.ರಮೇಶ ಜಾರಕಿಹೊಳಿಯ ಸಮಸ್ಯೆ ಏನೆ ಇದ್ದರು ಅದನ್ನು ಪಕ್ಷದ ರಾಜ್ಯ ಉಸ್ತುವಾರಿ ಜೊತೆ ಅಥವಾ ರಾಹುಲ್ ಗಾಂಧಿ ಜೊತೆ ಮಾತನಾಡಲು ಮುಕ್ತ ಅವಕಾಶ ಪಕ್ಷ ನೀಡಿದೆ ಎಂದು ತಿಳಿಸಿದರು.
ಬಿಜೆಪಿ ಆಪರೇಶನ್ ಕಮಲದ ಬಗ್ಗೆ ಮಾತನಾಡಿದ ಅವರು ರಾಜ್ಯ ಸರಕಾರ ಸುಭದ್ರವಾಗಿದೆ.ಬಿಜೆಪಿ ಅವರ ಸರಕಾರ ಬೀಳಿಸುವ ಪ್ರಯತ್ನವನ್ನು ಕಳೆದ ಆರು ತಿಂಗಳಿನಿಂದ ಮಾಡುತ್ತಿದ್ದಾರೆ.ಬಿಜೆಪಿ ಪಕ್ಷದ ಆಮಿಶಕ್ಕೆ ನಮ್ಮ ಪಕ್ಷದವರು ಯಾರು ಬಲಿಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತ ಪಡೆಸಿದರು.
ಭಾಕ್ಸ್
ರಾಮ ಮಂದಿರ ಬಿಜೆಪಿಯವರು ಗುತ್ತಿಗೆ ತೆಗೆದುಕೊಂಡಿಲ್ಲ,ಇಡಿ ದೇಶಕ್ಕೆ ಸಂಬಂಧಿಸಿದ ಮಂದಿರವಾಗಿದೆ. ರಾಮ ಮಂದಿರ ನಿರ್ಮಾಣಕ್ಕೆ ಯಾರದ್ದು ವಿರೋಧವಿಲ್ಲ ಎಲ್ಲರಿಗೂ ರಾಮ ಮಂದಿರದ ಬಗ್ಗೆ ಮಾತನಾಡುವ ಹಕ್ಕಿದೆ.

ಸತೀಶ ಜಾರಕಿಹೊಳಿ
ಅರಣ್ಯ ಸಚಿವ

loading...